ನವದೆಹಲಿ: ಕಾಂಗ್ರೆಸ್ ಮುಖಂಡ, ವಕ್ತಾರ ರಾಜೀವ್ ತ್ಯಾಗಿ ಅವರು ಇಂದು ಮೃತಪಟ್ಟಿದ್ದಾರೆ.
ಇಂದು ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಅದನ್ನು ಮುಗಿಸಿ ಬಂದವರು ಒಮ್ಮೆಲೆ ಅಸ್ವಸ್ಥರಾಗಿದ್ದಲ್ಲದೆ, ತಮ್ಮ ಮನೆ ವೈಶಾಲಿಯಲ್ಲಿ ಎಚ್ಚರತಪ್ಪಿ ಬಿದ್ದಿದ್ದಾರೆ.
ಅವರನ್ನು ಕೂಡಲೇ ಘಾಜಿಯಾಬಾದ್ನಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸ್ತಂಭನಕ್ಕೆ ಒಳಗಾದ ರಾಜೀವ್ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರೂ ಪ್ರಯೋಜನ ಆಗಲಿಲ್ಲ. ಇಂದು ಸಂಜೆ 5ಗಂಟೆಗೆ ಟಿವಿ ಡಿಬೇಟ್ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ರಾಜೀವ್ ಟ್ವೀಟ್ ಮಾಡಿದ್ದರು. ಇದೇ ಅವರ ಕೊನೇ ಟ್ವೀಟ್ ಆಗಿದೆ. ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿದ ಕಾಂಗ್ರೆಸ್… ಇಡೀ ದಿನ ರಾಜಕೀಯ ಮೇಲಾಟ
ರಾಜೀವ್ ತ್ಯಾಗಿ ಅವರ ನಿಧನಕ್ಕೆ ಪಕ್ಷ ತೀವ್ರ ದುಃಖ ವ್ಯಕ್ತಪಡಿಸಿದೆ. ನಿಜವಾದ ದೇಶಭಕ್ತನನ್ನು ಕಳೆದುಕೊಂಡಿದ್ದೇವೆ. ರಾಜೀವ್ ಸಾವಿನ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಹಾಗೇ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ. ಕೆ.ಸಿ.ವೇಣುಗೋಪಾಲ್ ಸೇರಿ ಕಾಂಗ್ರೆಸ್ನ ಹಲವು ಮುಖಂಡರು ಟ್ವೀಟ್ ಮೂಲಕ ರಾಜೀವ್ ತ್ಯಾಗಿ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಸಂಬಿತ್ ಪಾತ್ರಾ ರಾಜೀವ್ ನಿಧನದ ಸುದ್ದಿ ಕೇಳಿ ಶಾಕ್ ಆಯಿತು ಎಂದಿದ್ದಾರೆ. (ಏಜೆನ್ಸೀಸ್)