ನ್ಯೂಸ್

ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ!; ರಾಜ್ಯ ಕಾಂಗ್ರೆಸ್

ಬೆಂಗಳೂರು: ಬಿಜೆಪಿ(BJP) ವಿರುದ್ಧ ಸರಣಿ ಟ್ವೀಟ್(Tweet) ಮೂಲಕ ಟೀಕಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಅಧಿಕಾರದ ಅವಧಿಯಲ್ಲಿ ಮಾಡಿದ ಲೂಟಿ, ಹಗರಣಗಳನ್ನು ತನಿಖೆಗೆ ವಹಿಸುತ್ತೇವೆ ಎಂದು ಹೇಳಿದೆ.

"ಗೆಲುವಿನ ಹೊಣೆಯನ್ನು ಮೋದಿ ಹೊರುತ್ತಿದ್ದರು, ಈಗ ಸೋಲಿನ ಹೊಣೆಯನ್ನು ಯಾರು ಹೊರುತ್ತಾರೆ ಬಿಜೆಪಿ? ರಮೇಶ್ ಜಿಗಜಣಗಿ ಹೇಳಿದಂತೆ, ಯಾರನ್ನು ನೇಣಿಗೆ ಹಾಕುವಿರಿ?, ಯಾರ ಕಾಲು ಕಡಿಯುವಿರಿ? ಜೋಶಿ, ಸಂತೋಷ್ ತಲೆಮರೆಸಿಕೊಂಡಿರುವುದು ನೇಣಿನ ಭಯಕ್ಕೋ, ಕಾಲು ಕಡಿಯುವ ಭಯಕ್ಕೋ? ಅಂದಹಾಗೆ ನಿಮ್ಮ ಚಾಣಕ್ಯ ಎಲ್ಲಿ, ಪತ್ತೆಯೇ ಇಲ್ಲವಲ್ಲ?" ಎಂದು ಟ್ವೀಟ್​ನಲ್ಲಿ ತಿಳಿಸಿದೆ.

ಮತ್ತೊಂದು ಟ್ವೀಟ್​ನಲ್ಲಿ, "ಪ್ರತಾಪ್ ಸಿಂಹ(Prathap Simha) ಅವರೇ, ಚಿಂತಿಸಬೇಡಿ, ಬಿಜೆಪಿಯ ಎಲ್ಲಾ ಹಗರಣಗಳು, ಅಕ್ರಮಗಳು, ಲೂಟಿಗಳನ್ನು ತನಿಖೆಗೆ ವಹಿಸುತ್ತೇವೆ. ಮುಲಾಜು ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಯಾರೊಬ್ಬರ ಅಂಜಿಕೆಯೂ ನಮಗಿಲ್ಲ" ಎಂದು ಹೇಳಿದೆ.

"ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ! ತನಿಖೆಗೆ ತಾವೂ ಕೂಡ ಸಾಕ್ಷಿ ನೀಡಬಹುದು, ತಮ್ಮ ನಾಯಕರ ಲೂಟಿ ಬಗ್ಗೆ ನಿಮಗೆ ಹೆಚ್ಚು ತಿಳಿದಿರುತ್ತದೆ" ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.