ಬೆಂಗಳೂರು:
ಸ್ಥಬ್ದ ಚಿತ್ರ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಿಲ್ಲರೆ ರಾಜಕಾರಣ ಬಂದ್ ಮಾಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಹದಿನಾಲ್ಕು ವರ್ಷದಲ್ಲಿ ಹತ್ತು ವರ್ಷ ಅವಕಾಶ ಸಿಕ್ಕಿದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆ ಹತ್ತು ವರ್ಷದಲ್ಲಿ ಬಹಳಷ್ಟು ಕಾಲ ನಮ್ಮದೇ ಸರ್ಕಾರ ಇತ್ತು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
2006, 2007, 2009, 2010 ರಲ್ಲಿ ರಾಜ್ಯದ ಸ್ತಬ್ಧಚಿತ್ರಗಳಿಗೆ ಅವಕಾಶ ಕೊಟ್ಟಿರಲಿಲ್ಲ. ಆಗ ನಮ್ಮ ನಾಡಿಗೆ ಅಪಮಾನ ಆಗಿರ್ಲಿಲ್ವಾ,? ಆಗ ಯಾಕೆ ಸಿದ್ದರಾಮಯ್ಯ ಮಾತಾಡಲಿಲ್ಲ? ಎಂದು ಕೇಳಿದರು.
ಸ್ತಬ್ಧಚಿತ್ರ ಆಯ್ಕೆಗೊಂದು ಸಮಿತಿ ಇದೆ. ಆ ಸಮಿತಿ ನ್ಯಾಯಯುತವಾಗಿ ಎಲ್ಲ ರಾಜ್ಯಗಳಿಗೂ ಕೊಡ್ತಾರೆ. ಪ್ರತೀ ವರ್ಷ ಆಯ್ಕೆ ಮಾಡ್ತಾರೆ. ಹತ್ತು ವರ್ಷ ನಮ್ಮ ಅವಧಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದರು.
ದುಂದು ವೆಚ್ಚ:
ಗ್ಯಾರಂಟಿ ಯೋಜನೆ ಉಸ್ತುವಾರಿ ನೆಪದಲ್ಲಿ ತಮ್ಮ ಬೆಂಬಲಿಗರನ್ನ ತೃಪ್ತಿ ಪಡಿಸೋಕೆ ಸಮಿತಿ ಮಾಡಲು ಹೊರಟಿದ್ದಾರೆ ಎಂದು ಜೋಷಿ ತಿಳಿಸಿದರು.
ಇದು ಕಾನೂನಾತ್ಮಕವಾಗಿ ಸರಿಯಲ್ಲ. ಕಾನೂನಾತ್ಮಕವಾಗಿ, ರಾಜಕೀಯವಾಗಿ ನಾವು ಹೋರಾಟ ಮಾಡ್ತೇವೆ. ದುಂದುವೆಚ್ಚ ಮಾಡುವುದು ಸರಿಯಲ್ಲ ಎಂದರು.
ಅಯೋಧ್ಯೆ..
ಅಯೋಧ್ಯೆಗೆ ಬನ್ನಿ ಎಂದು ನಿಮಗೆ ಕರಿದಿದ್ದೇವೆ ಬರೋದಿದ್ದರೆ ಬನ್ನಿ. ನಾವು ಹೋಗ್ತೀವಿ ಅಷ್ಟೇ.
ಯಾರಿಗೆ ಶ್ರದ್ದೆ ಇದೆ ಅವರು ಹೋಗ್ತಾರೆ. ನಾವೇನು ನಿಮಗೆ ಬರ್ಲೇಬೇಕು ಅಂತ ಹೇಳಿಲ್ವಲ್ಲಾ ಎಂದರು.
ಬೇರೆಯವರೆಲ್ಲ ಅವರವರ ದೇಗುಲಕ್ಕೆ ಹೋದಾಗ ಯಾಕೆ ಹೋಗ್ತೀರಾ ಅಂತ ನಾವು ಕೇಳಿದ್ವಾ..?
ಸಿದ್ದರಾಮಯ್ಯ ಅವರು ಚಿಲ್ಲರೆ ರಾಜಕಾರಣ ಮಾಡಿ ಪ್ರಚಾರ ತೆಗೆದುಕೊಳ್ಳೋದು ಒಳ್ಳೆಯದಲ್ಲ ಎಂದರು.
ಪರಿಶೀಲಿಸಿ ಕ್ರಮ:
*ನಿಯಮ ಬಾಹಿರವಾಗಿ ಬಿಗ್ ಬಾಸ್ ಕಾರ್ಯಕ್ರಮ ನಡೀತಿದೆ ಎಂಬ ಆರೋಪ ವಿಚಾರ ಬಗ್ಗೆ
ಜಿಲ್ಲಾಧಿಕಾರಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿದ್ದಾರೆ. ಅಗ್ರಿಕಲ್ಚರ್ ಜಮೀನಿನಲ್ಲಿ ಬಿಗ್ ಬಾಸ್ ನಡೆಸೋಕೆ ಕಾನೂನಿನನಲ್ಲಿ ಏನೆಲ್ಲಾ ಅವಕಾಶಗಳಿವೆ ಅದನ್ನ ಪರಿಶೀಲಿಸಲಿ.
-ಆರ್.ಅಶೋಕ್, ವಿರೋಧ ಪಕ್ಷದ ನಾಯಕ