ನ್ಯೂಸ್

ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕೈ ಪೂರ್ವ ತಯಾರಿ; ಸಭೆ ಕರೆದ ಪ್ರಚಾರ ಸಮಿತಿ

ಬೆಂಗಳೂರು: ಲೋಕಸಭೆ ಚುನಾವಣೆಗೆ ಹಂತಹಂತವಾಗಿ ತಯಾರಿ ನಡೆಸಿರುವ ರಾಜ್ಯ ಕಾಂಗ್ರೆಸ್ ಭಾನುವಾರ ಪ್ರಚಾರ ಸಮಿತಿ ಸಭೆ ಕರೆದಿದೆ.

ವಿಧಾನಸಭೆ ಚುನಾವಣೆಗೆ ಮುನ್ನ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರಚನೆಗೊಂಡಿದ್ದ ಪ್ರಚಾರ ಸಮಿತಿ ಪಕ್ಷದ ಗೆಲುವಿಗೆ ಶ್ರಮ ಹಾಕಿತ್ತು. ಈ ತಂಡವನ್ನು ಪುನಃ ಸಕ್ರಿಯಗೊಳಿಸಲು ಕೆಪಿಸಿಸಿ ಉದ್ದೇಶಿಸಿದೆ.

ಇದೇ ಉದ್ದೇಶದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ.

ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ ಬಿ ಪಾಟೀಲ್ ಮತ್ತು ಪಕ್ಷದ ಹಿರಿಯ ನಾಯಕರುಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ಸೂಚನೆಗಳನ್ನು ತಮ್ಮ‌ತಂಡಕ್ಕೆ ರವಾನಿಸಲಿದ್ದಾರೆ.