ನ್ಯೂಸ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಂದ್ವ ನಿಲುವು: ಲಹರ್ ಸಿಂಗ್ ಟೀಕೆ | Indirectly made every cong workers Naxalite

ಬೆಂಗಳೂರು: ಸಂವಿಧಾನದ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದುಕೊಂಡು ಓಡಾಡುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸಂವಿಧಾನದ ಆಶಯಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್‌ಸಿಂಗ್ ಸಿರೋಯ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಬಿಜೆಪಿ, ಆರ್‌ಎಸ್‌ಎಸ್ ಜತೆಗೆ ಪ್ರಭುತ್ವದ ವಿರುದ್ಧ ನಮ್ಮ ಹೋರಾಟವೆಂದು ರಾಹುಲ್ ಗಾಂಧಿ ಹೇಳುವ ಮೂಲಕ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ.

ಪ್ರಭುತ್ವದ ವಿರುದ್ಧ ನಕ್ಸಲೀಯರು ಮಾತ್ರ ಹೋರಾಡುತ್ತಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಕಾಂಗ್ರೆಸ್ ಕಾರ್ಯಕರ್ತರನ್ನು ನಕ್ಸಲರು, ಮಾವೋವಾದಿಗಳು ಅಥವಾ ನಗರ ನಕ್ಸಲರು ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯು ಬಿಂಬಿಸುತ್ತಿದೆ ಎಂದು ಲಹರ್ ಸಿಂಗ್ ಸಿರೋಯ ಆರೋಪಿಸಿದ್ದಾರೆ.

ನಕ್ಸಲರ ಶರಣಾಗತಿ ನೆನಪು

ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ನಕ್ಸಲೀಯರಿಗೆ ಶರಣಾಗತಿ ಪ್ಯಾಕೇಜ್ ೋಷಿಸಿ, ಸಿಎಂ ಅಧಿಕೃತ ಕಚೇರಿಯಲ್ಲಿ ಶರಣಾದ ನಕ್ಸಲ್ ಕಾರ್ಯಕರ್ತರನ್ನು ವಿಶೇಷ ಗಣ್ಯ ಅತಿಥಿಗಳ ರೀತಿಯಲ್ಲಿ ಬರ ಮಾಡಿಕೊಂಡಿದ್ದನ್ನು ನೆನಪಿಸುತ್ತದೆ.

ಪ್ರಭುತ್ವದ ವಿರುದ್ಧ ಹೋರಾಡಬೇಕೆಂದು ರಾಹುಲ್ ಗಾಂಧಿ ಹೇಳುವುದಾದರೆ ಆಯಾ ರಾಜ್ಯದ ಕಾಂಗ್ರೆಸ್ ಸರ್ಕಾರಗಳನ್ನು ವಜಾಗೊಳಿಸಬೇಕಾಗುತ್ತದೆ. ಕಾಂಗ್ರೆಸ್ ನಾಯಕ ಏಕಕಾಲಕ್ಕೆ ಎರಡು ನಿಲುವುಗಳನ್ನು ಪ್ರತಿಪಾದಿಸುವುದು ಹೇಗೆ ಸಾಧ್ಯ ? ಎಂದು ಲಹರ್‌ಸಿಂಗ್ ಸಿರೋಯ ಪ್ರಶ್ನಿಸಿದ್ದಾರೆ.