ಸಿಎಂಆರ್​ ಶ್ರೀನಾಥ್​  
ನ್ಯೂಸ್

ಕಾಂಗ್ರೆಸ್​ಗೆ ತಕ್ಕ ಉತ್ತರ

ಕಿರುವಾರ ಎಸ್.ಸುದರ್ಶನ್

ಕೋಲಾರ: ಟಿಎಪಿಸಿಎಂಎಸ್​ ಚುನಾವಣೆಯಲ್ಲಿ ಸ್ವಯಂಘೋಷಿತ ಹಿರಿಯ ಸಹಕಾರಿಗಳಿಗೆ ಹಾಗೂ ಕಾಂಗ್ರೆಸ್​ ಮುಖಂಡರಿಗೆ ರೈತರು ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಎಪಿಸಿಎಂಎಸ್​ನಲ್ಲಿ ಸುಮಾರು 1980ರಲ್ಲಿ ನಡೆದ ಚುನಾವಣೆಯೇ ಕೊನೆಯಾಗಿತ್ತು. ಅಂದಿನಿಂದಲೂ ಅವಿರೋಧವಾಗಿ ಆಯ್ಕೆಯಾಗಿ ಬರಲಾಗುತ್ತಿತ್ತು. ಭಾನುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಲು ಮೂರು ಪಕ್ಷಗಳ ನೇತೃತ್ವದಲ್ಲಿ ಒಂದು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿತ್ತು. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸಹಕಾರಿ ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕೆ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ನಡೆದಿದೆ ಎಂದರು.
ಹಿರಿಯರ ಮಾರ್ಗದಲ್ಲಿ ಮೂರು ಪಕ್ಷಗಳ ಮುಖಂಡರು ಒಮ್ಮತಕ್ಕೆ ಬಂದು ಸೀಟು ಹಂಚಿಕೆಯನ್ನು ಮಾಡಲಾಗಿತ್ತು. ಆದರೆ ಕಾಂಗ್ರೆಸ್​ನ ಕೆಲವು ಹಿರಿಯ ಸಹಕಾರಿಗಳು ಜೆಡಿಎಸ್​ ಮತ್ತು ಬಿಜೆಪಿ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡಲು ಮುಂದಾಗಿದ್ದರು. ಅಲ್ಲದೆ ನಮ್ಮೊಂದಿಗೆ ಚರ್ಚೆ ನಡೆಯುತ್ತಿರುವಾಗಲೇ ಮತ್ತೊಂದು ಕಡೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು ಎಂದರು. ಇದರಿಂದ ಎಚ್ಚೆತ್ತುಕೊಂಡ ಜೆಡಿಎಸ್​&ಬಿಜೆಪಿ ಮುಖಂಡರು ಟಿಎಪಿಸಿಎಂಎಸ್​ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಒಗ್ಗಟ್ಟಾಗಿ ಹೋರಾಡಿದ ಪರಿಣಾಮ 8 ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದರು.