ನ್ಯೂಸ್

ಕಾಂಗ್ರೆಸ್​ ಚುನಾವಣಾ ರೇಸ್​ನಲ್ಲಿಲ್ಲ, ಸಾರ್ವಜನಿಕರ ಕೆಂಗಣ್ಣಿಗೆ ಮಾತ್ರ ಗುರಿಯಾಗಿದೆ: ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶ: ಬುಧವಾರ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮುಂಬರುವ ಚುನುವಾಣಾ ಓಟದಲ್ಲಿ 'ಕೈ' ಪಕ್ಷವಿಲ್ಲ, ಕೇವಲ ಸಾರ್ವಜನಿಕರ ಆಕ್ರೋಶಕ್ಕೆ ಮಾತ್ರ ಗುರಿಯಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಗೂ ಮುನ್ನ ಮತದಾರರನ್ನು ಸೆಳೆಯಲು ಆಡಳಿತಾರೂಢ ಬಿಜೆಪಿ ಸೆಪ್ಟೆಂಬರ್ 3 ರಿಂದ 'ಜನ ಆಶೀರ್ವಾದ ಯಾತ್ರೆ'ಗೆ ಚಾಲನೆ ನೀಡಿತು. ಇದನ್ನು ವಿರೋಧಿಸಿದ ಕಾಂಗ್ರೆಸ್, ಮಂಗಳವಾರ ಬಿಜೆಪಿ ವಿರುದ್ಧ 'ಜನ ಆಕ್ರೋಶ ಯಾತ್ರೆ' ಆರಂಭಿಸಿದೆ.

ಇದನ್ನು ಗಮನದಲಿಟ್ಟುಕೊಂಡು ಇಂದೋರ್‌ನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಸಿಎಂ ಚೌಹಾಣ್, "ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಯ ಸ್ಪರ್ಧೆಯಲ್ಲಿ ಎಲ್ಲಿಯೂ ಇಲ್ಲ. ಕೇವಲ ಸಾರ್ವಜನಿಕ ಕೆಂಗಣ್ಣಿಗೆ ಮಾತ್ರ ಗುರಿಯಾಗಿದೆ. ಕಾಂಗ್ರೆಸ್ಸಿಗರ ಏಕೈಕ ಉದ್ದೇಶವೆಂದರೆ ಮತಗಳನ್ನು ಗಳಿಸುವುದು, ಆದ್ರೆ ನಾವು ಸಾರ್ವಜನಿಕ ಸೇವೆ ಮಾಡುತ್ತೇವೆ" ಎಂದು ಹೇಳಿದರು.

"ಕಾಂಗ್ರೆಸ್‌ನ ನಿಜವಾದ ಮುಖ ಜನರಿಗೆ ತಿಳಿದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 230 ಸ್ಥಾನಗಳಲ್ಲಿ ಬಿಜೆಪಿ ದಾಖಲೆಯ ಮತಗಳಿಂದ ಗೆಲುವು ಸಾಧಿಸಲಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).