ಪರ್ಕಳದ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಿದ ಜಯಪ್ರಕಾಶ್​ ಹೆಗ್ಡೆ 'ಪರ್ಕಳದ ಲಕ್ಕಿ ಕೈ' ಕಟೌಟ್​ಗೆ ಹಾರ ಅರ್ಪಿಸಿದರು. ಪ್ರಸಾದ್​ರಾಜ್​ ಕಾಂಚನ್​, ರಮೇಶ್​ ಕಾಂಚನ್​, ಮೋಹನ್​ದಾಸ್​ ನಾಯಕ್​, ಗಣೇಶ್​ ರಾಜ್​ ಸರಳಬೆಟ್ಟು ಇತರರಿದ್ದರು. 
ನ್ಯೂಸ್

'ಪರ್ಕಳದ ಲಕ್ಕಿ ಕೈ'ಗೆ ಜಯಪ್ರಕಾಶ್​ ಹೆಗ್ಡೆ ಗೌರವ

ಕಾಂಗ್ರೆಸ್​ ಕಚೇರಿಗೆ ಭೇಟಿ -- ಕಾರ್ಯಕರ್ತರೊಂದಿಗೆ ಸಮಾಲೋಚನೆ

ಉಡುಪಿ: ಪರ್ಕಳದ ಕಾಂಗ್ರೆಸ್​ ಕಚೇರಿಗೆ ಉಡುಪಿ-ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್​ ಹೆಗ್ಡೆ ಮಂಗಳವಾರ ಭೇಟಿ ನೀಡಿ, ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ದಿ. ಆಸ್ಕರ್​ ಫರ್ನಾಂಡೀಸ್​ ಅವರ ಮೊದಲ ಚುನಾವಣೆಯಲ್ಲಿ ಬಳಸಿದ್ದ 'ಪರ್ಕಳದ ಲಕ್ಕಿ ಕೈ' ಕಟೌಟ್​ಗೆ ಹಾರ ಅರ್ಪಿಸಿ ಗೌರವಿಸಿದ ಹೆಗ್ಡೆ, ಕಾರ್ಯಕರ್ತರಿಗೆ ಹುರುಪು ತುಂಬಿದರು.

ಕಾಂಗ್ರೆಸ್​ ಮುಖಂಡ ಪ್ರಸಾದ್​ರಾಜ್​ ಕಾಂಚನ್​, ಉಡುಪಿ ಬ್ಲಾಕ್​ ಅಧ್ಯಕ್ಷ ರಮೇಶ್​ ಕಾಂಚನ್​, ಪರ್ಕಳ ಕಾಂಗ್ರೆಸ್​ನ ಅಧ್ಯಕ್ಷ ಮೋಹನ್​ದಾಸ್​ ನಾಯಕ್​ , ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿಯ ಸಾಮಾಜಿಕ ಜಾಲತಾಣದ ಸಂಯೋಜಕ ಗಣೇಶ್​ ರಾಜ್​ ಸರಳಬೆಟ್ಟು, ಭೂ ನ್ಯಾಯ ಮಂಡಳಿಯ ಸದಸ್ಯ ಜಯರಾಮ್​ ಪರ್ಕಳ, ದೂರದರ್ಶಕ ಆವಿಷ್ಕಾರದ ರೂವಾರಿ ಆರ್​. ಮನೋಹರ್​, ಕಾರ್ಯಕರ್ತರಾದ ಸದಾನಂದ ಪೂಜಾರಿ ಪರ್ಕಳ, ದೇವಿ ಪ್ರಸಾದ್​ ಆಚಾರ್ಯ, ಆದರ್ಶ ಶೆಟ್ಟಿ ಕೆಳಪರ್ಕಳ ಇತರರಿದ್ದರು.