ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿ ಪುಟ್ಟಮ್ಮರವರಿಗೆ ವಿಜಯಕುಮಾರ್ ಸತೀಶ್ ನೀನಾಸಂ ಅಭಿಮಾನಿಗಳ ಸಂಘದ ಅಧ್ಯಕ್ಷ ವಿ.ಆರ್.ವಿಜಯ್‌ಕುಮಾರ್ ನೇತೃತ್ವದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಅರುಣ, ಮಾದೇಶ, ಭೂಮಿಕ, ಕಿಟ್ಟಿ, ಸುಂದರೇಶ್, ಕೃಷ್ಣ ಇದ್ದರು. 
ನ್ಯೂಸ್

ಶಿಕ್ಷಕಿ ಪುಟ್ಟಮ್ಮಗೆ ಅಭಿನಂದನೆ

ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿ ಪುಟ್ಟಮ್ಮ ಅವರಿಗೆ ವಿಜಯಕುಮಾರ್ ಸತೀಶ್ ನೀನಾಸಂ ಅಭಿಮಾನಿಗಳ ಸಂಘದ ಅಧ್ಯಕ್ಷ ವಿ.ಆರ್.ವಿಜಯ್‌ಕುಮಾರ್ ನೇತೃತ್ವದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ವಿಜಯ್‌ಕುಮಾರ್ ಮಾತನಾಡಿ, ಅಂಗನವಾಡಿ ಶಿಕ್ಷಕಿ ಪುಟ್ಟಮ್ಮರವರು ಹಲವಾರು ವರ್ಷಗಳ ಕಾಲ ವಳಗೆರೆಹಳ್ಳಿ ಅಂಗನವಾಡಿಯಲ್ಲಿ ಉತ್ತಮವಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಇವರು ಇನ್ನಷ್ಟು ಉತ್ತಮವಾಗಿ ಸೇವೆ ಮಾಡಲಿ ಎಂಬ ಉದ್ದೇಶದಿಂದ ಸತೀಶ್ ನೀನಾಸಂ ಅಭಿಮಾನಿಗಳ ಸಂಘ ಹಾಗೂ ವಳಗೆರೆಹಳ್ಳಿ ಗ್ರಾಮಸ್ಥರಿಂದ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡು ಅರ್ಥಪೂರ್ಣವಾಗಿ ಅಭಿನಂದಿಸಲಾಗುತ್ತಿದೆ ಎಂದರು. ಗ್ರಾಮದ ಮುಖಂಡರಾದ ಅರುಣ, ಮಾದೇಶ, ಭೂಮಿಕಾ, ಕಿಟ್ಟಿ, ಸುಂದರೇಶ್, ಕೃಷ್ಣ ಹಾಗೂ ಗ್ರಾಮಸ್ಥರು ಇದ್ದರು.