ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸೋಮವಾರ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಸತ್ಯನಾರಾಯಣ ಹೇಮಾದ್ರಿ, ಜಿ.ಎನ್.ಪಾಟೀಲ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ ಇದ್ದರು.
ಬಾಗಲಕೋಟೆ: ಸರ್ಕಾರಿ ಮೆಡಿಕಲ್ ಕಾಲೇಜು ೨೦೧೩ ರಲ್ಲಿ ಘೋಷಣೆಯಾಗಿತ್ತು, ಆಗ ಐದು ವರ್ಷ, ಈಗ ೩ ವರ್ಷ ಸೇರಿದಂತೆ ಒಟ್ಟು ಎಂಟು ವರ್ಷದಿಂದ ಶಂಕು ಸ್ಥಾಪನೆ ಮಾಡಲಿಲ್ಲ. ಈಗ ಉಪ ಚುನಾವಣೆ ಹೊತ್ತಿನಲ್ಲಿ ಅಡಿಗಲ್ಲು ಹಾಕುವುದು, ಬಸವೇಶ್ವರ ಹಾಗೂ ಛತ್ರಪತ್ರಿ ಶಿವಾಜಿ ಪುತ್ಥಳಿಗೆ ಅನುದಾನ ನೀಡುವ ಪ್ರಯತ್ನಗಳು ಮಾಡಿ ಪ್ರಚಾರದ ದೃಷ್ಠಿಯಿಂದ ಗಿಮಿಕ್‌ಗಳು ಸೃಷ್ಟಿಸಿ ದೊಡ್ಡಮಟ್ಟದ ಬೂತ ಬಿಟ್ಟು ಹೋಗಿದ್ದಾರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಟೀಕಿಸಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮಾತಿಗೆ ಪ್ರತ್ಯುತ್ತರ ನೀಡಿದರು. ೨೦೦೦ ಇಸ್ವಿಯಲ್ಲಿ ನಾನು ಒಬ್ಬನೇ ಸಂಘದ ಸದಸ್ಯರ ಸಹಕಾರದೊಂದಿಗೆ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದೆ. ೨೫ ವರ್ಷ ಪೂರ್ಣಗೊಂಡಿದೆ. ಸಿಎಂ ಸಿದ್ದರಾಮಯ್ಯ ಶಂಕು ಮಾಡಿರುವುದಕ್ಕೆ ನನ್ನ ತಕರಾರರು ಇಲ್ಲ. ಆದರೇ ಕಾರ್ಫಸ್ ಫಂಡ ೩೮೦ ಕೋಟಿ ರೂ. ವಾಪಸ್ ನೀಡಲಿಲ್ಲ. ಈಗ ಏಕಾಏಕಿ ರಾಜೀವ ಗಾಂಽ ವಿವಿಯಿಂದ ೩೧೯ ಕೋಟಿ ರೂ. ಅಂತ ಹಣ ನೀಡುವುದಾಗಿ ತಿಳಿಸಿದ್ದಾರೆ. ಈಗ ಭೂಮಿ ಪೂಜೆ ಮಾಡಿ ಗಿಮಿಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಛತ್ರಪತಿ ಶಿವಾಜಿ ಮಹಾರಾಜರು, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಈಗಾಗಲೇ ಜಾಗ ಸಹ ಗುರುತಿಸಲಾಗಿದೆ. ನಗರಸಭೆ ಇತರೆ ಇಲಾಖೆ ಪರವಾಣಿಗೆ ಕೊಟ್ಟಿತ್ತು. ಮರಾಠ ಸಮುದಾಯದವರು ಶಿವಾಜಿಯವರ ಮೂರ್ತಿ ಮತ್ತು ಬಿವಿವಿ ಸಂಘದಿAದ ಬಸವೇಶ್ವರ ಮೂರ್ತಿ ಸಿದ್ಧವಾಗಿವೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದಕ್ಕೆ ಅನುಮತಿ ನೀಡಲಿಲ್ಲ. ಯಾರೋ ಓಬ್ಬ ವ್ಯಕ್ತಿ ಮನವಿ ಪತ್ರ ನೀಡಿದಕ್ಕೆ ಸಿಎಂ ಸಿದ್ದರಾಮಯ್ಯ ತಲಾ ೪೦ ಲಕ್ಷ ರೂ. ನೀಡುವುದಾಗಿ ಸಹಿ ಮಾಡಿದ್ದಾರೆ. ನಾವು ಅನುದಾನ ಕೇಳಿಲ್ಲ. ಆದರೇ ಯಾವ ಇಲಾಖೆ ಮೂಲಕ ಅನುದಾನ ಅಂತ ಸ್ಪಷ್ಟವಾಗಿ ತಿಳಿಸಿಲ್ಲ. ಇದು ಯಾವ ರೀತಿ ಆಡಳಿತ ಅಂತ ಖಾರವಾಗಿ ಪ್ರಶ್ನಿಸಿದ ಅವರು, ವೀರಶೈವ ಲಿಂಗಾಯತ ಸಮಾಜ, ಮರಾಠ ಸಮಾಜಕ್ಕೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ಜರಿದರು.
ನಮ್ಮ ಬಿಜೆಪಿ ಸರ್ಕಾರ ಅಽಕಾರದಲ್ಲಿ ಇದ್ದಾಗ ನವನಗರ ಯೂನಿಟ್ ೩ ಕ್ಕೆ ಚಾಲನೆ ನೀಡಿದೇವು, ಭಗವತಿ, ಶಿರೂರು ಏತ ನೀರಾವರಿಗೆ ೬೦೦ ಕೋಟಿ ರೂ. ಅನುಮೋದನೆ ನೀಡಿದ್ದೇವೆ. ಮುಚಖಂಡಿ ಕೆರೆ ತುಂಬಿಸಲು, ತೋವಿವಿ ನೀರು ಒದಗಿಸಲು ೧೦ ಕೋಟಿ ಯೋಜನೆ ಚಾಲನೆ ನೀಡಿದೇವು. ಇಂದಿಗೂ ಇವುಗಳ ಚಾಲನೆ ಸಿಕ್ಕಿಲ್ಲ. ಬೊಗಸೆ ನೀರು ಹರಿದಿಲ್ಲ. ಗ್ರಾಮೀಣ ರಸ್ತೆಗಳು ಹಾಳಾಗಿವೆ. ಮೂರು ವರ್ಷದಿಂದ ಬಾಗಲಕೋಟೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ದೂರಿದರು.
ಕಾಣದ ಕೈ ಕೈವಾಡ ; ಕಾಂಗ್ರೆಸ್ ಪಕ್ಷಕ್ಕೆ ವಾರಸುದಾರರು ಇಲ್ಲವೇ ?
ಬಾಗಲಕೋಟೆ ಮತಕ್ಷೇತ್ರದಲ್ಲಿ ಕಳೆದ ಮೂರು ವರ್ಷದಿಂದ ಕಾಣದ ಕೈ ಕೈವಾಡ ಅಡಗಿದೆ. ಕಾಂಗ್ರೆಸ್ ಪಕ್ಷದಲ್ಲಿ ವಾರಸುದಾರರ ಇಲ್ಲ ಎನ್ನುವಂತಾಗಿದೆ. ದಿ.ಶಾಸಕ ಎಚ್.ವೈ.ಮೇಟಿಯವರು ಇದ್ದಾಗಲೂ ಇತ್ತು ಈಗಲೂ ಅದೇ ಮುಂದುವರೆದಿದೆ. ಚುನಾಯಿತ ಪ್ರತಿನಿಽಯೂ ಅಲ್ಲದ ವ್ಯಕ್ತಿ ಕಾಣದ ಕೈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ನೋಡಿದರೆ ಬಾಗಲಕೋಟೆ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನವರಿಗೆ ಸ್ವಾಭಿಮಾನ ಇಲ್ಲವೇ ಎಂದು ಪ್ರಶ್ನಿಸಿದರು. ಈ ಭಾರಿಯ ಉಪಚುನಾವಣೆಯಲ್ಲಿ ಅಂದಾದುAಽ ನಡೆಯುವುದಿಲ್ಲ. ಡೀಲಿಂಗ್ ಮಾಸ್ಟ್ರ ದೂರ ಇಡಲು ಕ್ಷೇತ್ರದ ಜನರು ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಶಾಸಕ ಚರಂತಿಮಠ ತಿಳಿಸಿದರು.
ಮುಖಂಡರಾದ ಸತ್ಯನಾರಾಯಣ ಹೇಮಾದ್ರಿ, ಜಿ.ಎನ್.ಪಾಟೀಲ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ ಇದ್ದರು.