ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ನಿವೃತ್ತ ಕೇಂದ್ರ ಸರ್ಕಾರಿ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಶರಣಪ್ಪ, ಷಣ್ಮುಖಪ್ಪ, ಎಸ್.ಆರ್.ಚಂದ್ರಪ್ಪ, ಡಿ.ವಿ.ಭವಾನಿ, ಲಲಿತಾ, ಗಿರೀಶ್, ಹನುಮಂತಪ್ಪ ಮುಂತಾದವರಿದ್ದರು.  
ನ್ಯೂಸ್

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಖಂಡನೆ

ಶಿವಮೊಗ್ಗ: ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಸೋಮವಾರ ಸರ್ಕಾರಿ ನಿವೃತ್ತ ನೌಕರರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನ ಪರಿಷ್ಕರಿಸಲು ಈಗಾಗಲೇ ಎಂಟನೇ ವೇತನ ಆಯೋಗ ರಚನೆ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಬಿಲ್ ಮಂಡಿಸುವಾಗ 2026 ಏಪ್ರಿಲ್ 1ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ ಎಂಬ ನಿರ್ಣಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಇದು ಪಿಂಚಣಿದಾರರಿಗೆ ಆರ್ಥಿಕ ಸಂಕಷ್ಟ ತರುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ರಾಜ್ಯಗಳ ಪಿಂಚಣಿದಾರರ ಒಕ್ಕೂಟ ಇತ್ತೀಚೆಗೆ ಸಭೆ ನಡೆಸಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶರಣಪ್ಪ, ರಾಜ್ಯ ಕಾರ್ಯದರ್ಶಿ ಎಸ್.ಆರ್.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ, ಪದಾಧಿಕಾರಿಗಳಾದ ಡಿ.ವಿ.ಭವಾನಿ, ಹನುಮಂತಪ್ಪ, ಗಿರೀಶ್, ಲಲಿತಾ, ಜಿ.ಕೆಂಚಪ್ಪ, ಗುರುಸಿದ್ದಪ್ಪ, ಬಸವರಾಜಪ್ಪ, ಭಗವಂತರಾವ್ ಮುಂತಾದವರಿದ್ದರು.