ಸಾಗುವಳಿ ಜಮೀನು ತೆರವು ಖಂಡಿಸಿ ಕರವೇ ಪ್ರಮುಖರಾದ ಎಸ್.ಮಧು, ಆರ್.ಮಂಜು, ರವಿ, ಲೋಕೇಶ್, ನವೀನ್, ಅಂಬರೀಷ್ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ನ್ಯೂಸ್

ತೆರವು ಕಾರ್ಯಾಚರಣೆಗೆ ಖಂಡನೆ: ಪ್ರತಿಭಟನೆ

ಶಿವಮೊಗ್ಗ: ಭದ್ರಾವತಿ ತಾಲೂಕಿನ ಇಟ್ಟಿಗೆಹಳ್ಳಿ, ಗುಡುಮಘಟ್ಟ, ಆನವೇರಿ, ಅರಸಿನಘಟ್ಟ ಗ್ರಾಮದ ಸುತ್ತಮುತ್ತ 60-70 ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನನ್ನು ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸಿ ತೆರವುಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣ ವೇದಿಕೆ ಪ್ರಮುಖರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಭಾಗದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಾರಂ ನಂ. 50, 53, 57ರ ಮೂಲಕ ಸಾಗುವಳಿ ಪತ್ರ ಪಡೆದಿದ್ದರೂ ಜಮೀನನ್ನು ತೆರವು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಮುಖರಾದ ಆರ್.ಮಂಜು, ಎಸ್.ಮಧು, ಬಾಲಮುರುಳಿ, ಅಂಬರೀಷ್, ಅನಿಲ್‌ಕುಮಾರ್, ರವಿ, ವಿಜಯ್‌ಕುಮಾರ್, ನವೀನ್, ಲೋಕೇಶ್ ಮುಂತಾದವರಿದ್ದರು.