ಬೆಂಗಳೂರು: ಕಂಪ್ಯೂಟರ್ ಆವಿಷ್ಕಾರ ಮಾಡಿದ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್(Charles Babbage) ಅವರ ಹುಟ್ಟಿದ ದಿನವಾದ ಡಿಸೆಂಬರ್ 26ರಂದು ಕಂಪ್ಯೂಟರ್ ಅಪರೇಟರ್ ದಿನ ಆಚರಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್‌ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಈ ಹೆಜ್ಜೆ ಇಟ್ಟಿದೆ.
ಡಿ.25 ರಂದು ಉತ್ತಮ ಆಡಳಿತ ದಿನ ಆಚರಿಸಲು ೋಷಿಸಲಾಗಿದ್ದು, ಆ ದಿನ ಸಾರ್ವತ್ರಿಕ ರಜೆ ದಿನವಾದ ಕಾರಣ ಡಿ.26 ರಂದು ಉತ್ತಮ ಆಡಳಿತ ದಿನದೊಂದಿಗೆ ಚಾರ್ಲ್ಸ್ ಬ್ಯಾಬೇಜ್ ಸ್ಮರಣಾರ್ಥ ‘ಕಂಪ್ಯೂಟರ್ ಅಪರೇಟರ್ ದಿನ’ ಆಚರಿಸಲು ತೀರ್ಮಾನಿಸಿ ಆದೇಶ
ಹೊರಡಿಸಲಾಗಿದೆ. ಎಲ್ಲ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಕಂಪ್ಯೂಟರ್ ಅಪರೇಟರ್ ದಿನ ಆಚರಿಸಲು ಪಂಚಾಯತ್ ರಾಜ್ ಆಯುಕ್ತಾಲಯ ಆದೇಶಿಸಿದೆ.