ಇಂಡಿಯಾನಾ ಆಸ್ಪತ್ರೆ- ಹಾರ್ಟ್ ಇನ್‌ಸ್ಟಿಟ್ಯೂಟ್ ಲೈವ್ ಟಿಎವಿಐ ಕಾರ್ಯಾಗಾರದಲ್ಲಿ ಡಾ.ಯೂಸುಫ್ ಕುಂಬ್ಳೆ, ಡಾ.ಸಂಧ್ಯಾ ರಾಣಿ, ಡಾ.ಕಾರ್ತಿಕೇಯನ್ ಟಿ, ಡಾ.ಆಕಾಶ್ ನಾಯರ್, ಡಾ.ಕೆ.ಸುಬ್ರಹ್ಮಣ್ಯಂ, ಡಾ.ಸಯೀದ್ ಮೊಹಮ್ಮದ್ ಮೊದಲಾದವರಿದ್ದರು.
- ಇಂಡಿಯಾನಾ ಆಸ್ಪತ್ರೆಯಲ್ಲಿ ಕಾರ್ಯಾಗಾರ
- ಹೃದಯದ ವಾಲ್ವ್ ಬದಲಿಸುವ ತಂತ್ರಜ್ಞಾನ
ಮಂಗಳೂರು: ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ವತಿಯಿಂದ ಲೈವ್ ಟಿಎವಿಐ ಕಾರ್ಯಾಗಾರ ನಡೆಯಿತು. ಅತ್ಯಾಧುನಿಕ ಕಾರ್ಯವಿಧಾನದ ಮೂಲಕ ಹೃದಯದ ವಾಲ್ವ್ ಬದಲಿಸುವ ತಂತ್ರಜ್ಞಾನ ಪ್ರದರ್ಶಿಸಲಾಯಿತು.
ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಹಾಗೂ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಿತು. ಅವರು ಕಾರ್ಯಕ್ರಮದ ಕೋರ್ಸ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದರು. ಅತ್ಯಂತ ಸಂಕೀರ್ಣ ಮತ್ತು ಹೆಚ್ಚಿನ ಅಪಾಯದ ಟಿಎವಿಐ ಪ್ರಕ್ರಿಯೆಗಳನ್ನು ನೇರ ಪ್ರದರ್ಶನದ ಮೂಲಕ ನೆರವೇರಿಸಿದರು. ಇದರಲ್ಲಿ ಬಿಕ್ಯುಪಿಡ್ ಏರೋಟಿಕ್ ವಾಲ್ವ್, ತೀವ್ರವಾಗಿ ಕ್ಯಾಲ್ಸಿಫೈಗೊಂಡ ವಾಲ್ವ್‌ಗಳು, ಸಂಕೀರ್ಣ ಅನಾಟಮಿ ಹಾಗೂ ವಾಲ್ವ್ -ಇನ್-ವಾಲ್ವ್ ರೀತಿಯ ಪ್ರಕ್ರಿಯೆಗಳು ಸೇರಿದ್ದವು. ಎರಡು ದಿನಗಳ ಅವಧಿಯಲ್ಲಿ ಭಾಗವಹಿಸಿದ ವೈದ್ಯರಿಗೆ ನೇರ ಪ್ರಕ್ರಿಯೆಗಳ ಮೂಲಕ ಉನ್ನತ ಮಟ್ಟದ ಟಿಎವಿಐ ತಂತ್ರಜ್ಞಾನಗಳ ಕುರಿತು ಸಮಗ್ರ ಅರಿವು ನೀಡಲಾಯಿತು.
ಲೈವ್ ಕಾರ್ಯಾಗಾರಕ್ಕೆ ಡಾ.ಸಂಧ್ಯಾ ರಾಣಿ ಪಿ.ಎನ್., ಡಾ.ಕಾರ್ತಿಕೇಯನ್ ಟಿ., ಡಾ.ಆಕಾಶ್ ನಾಯರ್ ಬೆಂಬಲ ನೀಡಿದರು. ಡಾ.ಕೆ.ಸುಬ್ರಹ್ಮಣ್ಯಂ, ಡಾ.ಸಯೀದ್ ಮೊಹಮ್ಮದ್ ವಿವಿಧ ಶೈಕ್ಷಣಿಕ ಕಾರ್ಯಕ್ರಮ ಮತ್ತು ಕೋರ್ಸ್ ಚಟುವಟಿಕೆಗಳನ್ನು ಸಂಯೋಜಿಸಿದರು. ಕಾರ್ಯಾಗಾರದ ಅಂಗವಾಗಿ ವಿಶೇಷ ಡಿನ್ನರ್ ಮೀಟ್ ಮತ್ತು ಟಿಎವಿಐ ಸಿಂಪೋಸಿಯಂ ನಡೆಯಿತು. ಮಂಗಳೂರಿನ ಹಿರಿಯ ಕಾರ್ಡಿಯಾಲಜಿಸ್ಟ್ ಡಾ.ಆರ್.ಎಲ್ .ಕಾಮತ್‌ರವರು ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ಕರ್ನಾಟಕದಲ್ಲಿ ಅತ್ಯಾಧುನಿಕ ಹೃದಯ ತಂತ್ರಜ್ಞಾನ ಮತ್ತು ಉನ್ನತ ಮಟ್ಟದ ಹೃದಯ ಚಿಕಿತ್ಸೆಯ ಕೇಂದ್ರವಾಗಿ ಬೆಳೆದಿದೆ ಎಂದು ಪ್ರಶಂಸಿಸಿದರು.