ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸತತ 7ನೇ ಬಾರಿ ಸಮಗ್ರ ಪ್ರಶಸ್ತಿ ಪಡೆದ ಲಿಂಗದಹಳ್ಳಿ ಲಿಂಗದಹಳ್ಳಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು. ಚಂದ್ರಕಾಂತ್ ಪಾಟೀಲ್, ಲತಾ ತಮ್ಮಯ್ಯ, ಉಪನ್ಯಾಸಕರು ಇದ್ದಾರೆ.  
ನ್ಯೂಸ್

ಲಿಂಗದಹಳ್ಳಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಲಿಂಗದಹಳ್ಳಿ: ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಲಿಂಗದಹಳ್ಳಿ ಸರ್ಕಾರಿ ಕಾಲೇಜು ಸತತವಾಗಿ ಏಳನೇ ಬಾರಿ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.

ಬಾಲಕರ ವೈಯಕ್ತಿಕ ವಿಭಾಗದಲ್ಲಿ 200, 3000, 5000 ಮೀ. ರನ್ನಿಂಗ್ ರೇಸ್, 5000 ಮೀ. ನಡಿಗೆ ಸ್ಪರ್ಧೆ, ಶಾಟ್‌ಪಟ್, ಚಕ್ರ ಎಸೆತ ಹಾಗೂ ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದೆ. 200, 400, 800, 3000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಗುಂಪು ಸ್ಪರ್ಧೆಗಳಾದ ಖೋ-ಖೋ, ಕಬಡ್ಡಿ, ಥ್ರೋಬಾಲ್, ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಮತ್ತು 4* 100 ಮೀ. ರಿಲೇ, 4*400 ಮೀ. ರಿಲೇ ಸ್ಪರ್ಧೆಗಳಲ್ಲಿ ಬಾಲಕರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವೈಯಕ್ತಿಕ ವಿಭಾಗದ 100, 200, 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, 400, 800, 1500 ಮೀ. ಓಟ ಮತ್ತು 3000 ಮೀ. ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಎತ್ತರ ಜಿಗಿತ ದ್ವಿತೀಯ, ಗುಂಡು ಎಸೆತ ದ್ವಿತೀಯ, ಜಾವಲಿನ್ ಎಸೆತದಲ್ಲಿ ಬಾಲಕಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಖೋ-ಖೋ, ಕಬಡ್ಡಿ, ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ವಾಲಿಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ್ ಪಾಟೀಲ್, ಉಪನ್ಯಾಸಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲತಾ ತಮ್ಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.