ನ್ಯೂಸ್

ಕಚೇರಿ ವೇಳೆ ನಿಯಮ ಪಾಲನೆ; ಆರೋಗ್ಯ ಇಲಾಖೆಯಿಂದ ಸುತ್ತೋಲೆ|Compliance office hours

ಬೆಂಗಳೂರು: ಕಚೇರಿ ವೇಳೆ ಅಧಿಕಾರಿ ಮತ್ತು ನೌಕರರು ಪಾಲಿಸಬೇಕಾದ ನಿಯಮಗಳನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ(Compliance during office hours; Circular from Health Department).

ಆರೋಗ್ಯ ಇಲಾಖೆ ಅಧಿಕಾರಿ,ಸಿಬ್ಬಂದಿ ಸಮಯ ಪಾಲನೆ ಮಾಡದಿರುವುದು, ಚಲನ-ವಲನ ವಹಿ ನಿರ್ವಹಿಸದೇ ಇರುವುದು, ಕರ್ತವ್ಯದ ಅವಧಿಯಲ್ಲಿ ಗುರುತಿನ ಚೀಟಿ ಧರಿಸದಿರುವುದು, ಅಧಿಕಾರಿ/ಸಿಬ್ಬಂದಿ ಹೆಸರು ಮತ್ತು ಹುದ್ದೆಯ ನಾಮಲಕಗಳನ್ನು ಅಳವಡಿಸದಿರುವ ಬಗ್ಗೆ ದೂರು

ಸ್ವೀಕೃತವಾದ ಹಿನ್ನೆಲೆಯಲ್ಲಿ ಸೂಚನೆಗಳನ್ನು ನೀಡಿ ಸುತ್ತೋಲೆ ಹೊರಡಿಸಲಾಗಿದೆ.

ಸುತ್ತೋಲೆಯಲ್ಲಿ ಸೂಚಿಸಿರುವ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಸಿಸಿಎ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಲಾಗಿದೆ.

-ಕಚೇರಿಗೆ ಬರುವ ವೇಳೆ ಹಾಗೂ ಹೊರಡುವ ವೇಳೆ ಪಾಲನೆ ಮಾಡಬೇಕು.

-ಕಚೇರಿ ಅವಧಿಪೂರ್ಣವಾಗುವರೆಗೆ ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕು.

-ಕಚೇರಿ ಸಮಯದಲ್ಲಿ ಕೆಲಸದ ನಿಮಿತ್ತ ತೆರಳಬೇಕಾಗಿದ್ದಲ್ಲಿ ಚಲನ-ವಲನ ವಹಿಸಿಯಲ್ಲಿ ಸಕಾರಣ ನಮೂದಿಸಿ ಮೇಲಧಿಕಾರಿ ಪೂರ್ವಾನುಮತಿ ಪಡೆಯಬೇಕು.

-ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿ ಕೊರಳಿಗೆ ಧರಿಸಬೇಕು.

-ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ತಮ್ಮ

ಹೆಸರು, ಹುದ್ದೆ ಸೂಚಿಸುವ ನಾಮಲಕಗಳನ್ನು ಅಳವಡಿಸಬೇಕು.

-ಹಿರಿಯ ನಾನಗರಿಕರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು.

-ಯಾವುದೇ ರೀತಿ ಪತ್ರ ಬಂದಾಗ ಕಚೇರಿ ಕೈಪಿಡಿ ಅನ್ವಯ ಕಾರ್ಯನಿರ್ವಹಿಸಬೇಕು.

-ಕಡತಗಳ ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು.

-ಇ-ಆಫೀಸ್ ಲಭ್ಯವಿರುವ ಕಡೆ ಕಡತ/ಸ್ವೀಕೃತಿಪತ್ರ ಪರಿಶೀಲಿಸಿ ತುರ್ತು ನಿಯಮಗಳನ್ವಯ ವಿಲೇವಾರಿ ಮಾಡಬೇಕು.