ನ್ಯೂಸ್

ಸೋನಿಯಾ ವಿರುದ್ಧ ಬಿಹಾರದಲ್ಲಿ ದೂರು

ಬಾಬುಪ್ರಸಾದ್​ ಮೋಡಿಸ್​

ಪಟನಾ: ರಾಷ್ಟ್ರಪತಿ ದ್ರೌಪದಿ ಮುಮು ಅವರ ಬಗ್ಗೆ ಅಗೌರವದಿಂದ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಕೋರಿ ಬಿಹಾರದ ನ್ಯಾಯಾಲಯವೊಂದಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಮುಜಾಫರ್​ಪುರದ ವಕೀಲ ಸುಧೀರ್ ಓಝಾ ಸಿಜೆಎಂ ಕೋರ್ಟ್​ಗೆ ಸಲ್ಲಿಸಿರುವ ದೂರಿನಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿಯವರ ಹೆಸರನ್ನೂ ನಮೂದಿಸಲಾಗಿದ್ದು ಅವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ. ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದ ರಾಷ್ಟ್ರಪತಿ ಮುಮು ಅವರ ಬಗ್ಗೆ ‘ಬಡಪಾಯಿ’ ಎಂದು ಸೋನಿಯಾ ಗಾಂಧಿ ಟೀಕಿಸಿದ್ದರು.