ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ನಿಂದಿಸಿದ ಆರೋಪದ ಮೇರೆಗೆ ಮಹಿಳೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಗುಂಬೆ ಠಾಣೆಗೆ ದೂರು ಸಲ್ಲಿಸುತ್ತಿರುವುದು. ಹರ್ಷೇಂದ್ರಕುಮಾರ್, ಅಮರನಾಥ ಶೆಟ್ಟಿ, ಸಾತ್ವಿಕ್ ಇತರರಿದ್ದರು.  
ನ್ಯೂಸ್

ಕಿಮ್ಮನೆಯನ್ನು ಬೈದ ಮಹಿಳೆ ವಿರುದ್ಧ ದೂರು

ತೀರ್ಥಹಳ್ಳಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಹೆಗ್ಗೋಡು ಗ್ರಾಪಂನ ಆಲಗೇರಿ ನಿವಾಸಿಯೊಬ್ಬರು ಸಾರ್ವಜನಿಕವಾಗಿ ಮಾನಹಾನಿಕರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಆಗುಂಬೆ ಠಾಣೆಗೆ ದೂರು ನೀಡಿದ್ದಾರೆ.

ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಭೀಮನಕಟ್ಟೆ ಬಳಿ ನಿರ್ಮಾಣವಾಗಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಫೆ.26ರಂದು ಸ್ಥಳೀಯ ಕೆಲ ಸಂಘಟನೆಗಳು ಹೆಗ್ಗೋಡು ಶಾಲೆ ಎದುರು ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭ ಮಾತನಾಡಿರುವ ಮಹಿಳೆ ಹೀನಾಯವಾಗಿ ಬೈದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊ ಕ್ಲಿಪ್‌ಗಳನ್ನೂ ಆಗುಂಬೆ ಪಿಎಸ್‌ಐ ಉಮೇಶ್ ನಾಯಕ್ ಅವರಿಗೆ ಸಲ್ಲಿಸಿದ್ದಾರೆ
ದೂರು ಸಲ್ಲಿಸುವಾಗ ಹರ್ಷೇಂದ್ರಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಸಾತ್ವಿಕ್, ವಿಕ್ರಂ ಶೆಟ್ಟಿ, ಶಶಿಭೂಷಣ್, ಆರುಣ್‌ಕುಮಾರ್, ಚಂದನ್, ಕಿರಣ್‌ಕುಮಾರ್ ಇತರರಿದ್ದರು.