ಬೆಂಗಳೂರು: ಸಹೋಹದ್ಯೋಗಿಗಳಿಗೆ ನಿಂದಿಸುತ್ತಿರುವ ಆರೋಪ ಬ್ಯಾಟರಾಯನಪುರ ಠಾಣೆಯ ಎಸ್‌ಬಿ ಡ್ಯೂಟಿಯ ಹೆಡ್ ಕಾನ್‌ಸ್ಟೆಬಲ್ ಹಿತೇಂದ್ರ ವಿರುದ್ಧ ಕೇಳಿ ಬಂದಿದೆ. ಈ ಕುರಿತು ಆಯುಕ್ತ ಬಿ. ದಯಾನಂದ್ ಅವರಿಗೆ ನೊಂದ ಸಿಬ್ಬಂದಿ ಪತ್ರ ಬರೆದಿದ್ದಾರೆ. ಹಿತೇಂದ್ರ, ತಮ್ಮ ಜತೆಗೆ ಕೆಲಸ ಮಾಡುವ ಸಿಬ್ಬಂದಿಯನ್ನು ಕೂಲಿಗಳ ರೀತಿ ನಡೆಸಿಕೊಳ್ಳುತ್ತಾರೆ. ಜಾತಿ, ಧರ್ಮ ಮತ್ತು ಪ್ರಾದೇಶಿಕತೆ ಮೇಲೆ ತಾರತಮ್ಯ ಮಾಡಿ ನಿಂದಿಸುತ್ತಾರೆ.
ಇದನ್ನು ಪ್ರಶ್ನಿಸಿದಾಗ ಡಿಸಿಪಿ, ಎಸಿಪಿ ಮತ್ತು ಸಚಿವರಿಗೆ ಬೇಕಾದರೂ ಹೇಳಿ. ನನ್ನ ಯಾರು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೆದರಿಕೆ ಸಹ ಹಾಕುತ್ತಾರೆ. ಕೆಲ ತಿಂಗಳ ಹಿಂದೆ ಬಾಪೂಜಿನಗರ ಆರ್ಚ್ ಬಳಿ ಓರ್ವ ವ್ಯಕ್ತಿ ಮೇಲೆ ಮೂವರು ಹಲ್ಲೆ ನಡೆಸುತ್ತಿದ್ದರು.
ಅಲ್ಲಿಗೆ ಗಸ್ತು ಸಿಬ್ಬಂದಿ ಅಲ್ಲಿಗೆ ಹೋದಾಗ ಅದೇ ಸಮಯಕ್ಕೆ ಹಿತೇಂದ್ರ ಬಂದು ಹಲ್ಲೆ ನಡೆಸಿದ್ದ ವ್ಯಕ್ತಿಯಿಂದ ಹಣ ಸುಲಿಗೆ ಮಾಡಿದ್ದಾರೆ. ಬಾರ್‌ವೊಂದರ ಕ್ಯಾಷಿಯರ್ ೆನ್ ಪೇಗೆ 97,000 ರೂ. ವರ್ಗಾವಣೆ ಮಾಡಿಸಿದರು. ಅಲ್ಲದೆ, 40 ಸಾವಿರ ರೂ. ನಗದು ಪಡೆದಿದ್ದಾರೆ. ಇದೇ ರೀತಿಯಾಗಿ ಬೇರೆ ಬೇರೆ ಅಕ್ರಮ ಎಸಗಿದ್ದು, ತನಿಖೆ ನಡೆಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.