ನ್ಯೂಸ್

ಟೂರಿಸ್ಟ್​ ವೀಸಾದಲ್ಲಿ ಬಂದು ಬೀದರ್​ನಲ್ಲಿ 8 ಜಮಾತಿಗಳಿಂದ ಧರ್ಮ ಪ್ರಚಾರ, ಬೀದರ್​ನಲ್ಲಿ ದೂರು ದಾಖಲು

ಬೀದರ್​: ಟೂರಿಸ್ಟ್​ ವೀಸಾ ಪಡೆದು ಕಿರ್ಗಿಸ್ತಾನದಿಂದ ಭಾರತಕ್ಕೆ ಬಂದಿದ್ದ 8 ಮಂದಿ ಜಮಾತಿಗಳು ಬೀದರ್​ನಲ್ಲಿ ಧರ್ಮ ಪ್ರಚಾರದಲ್ಲಿ ತೊಡಗಿದ್ದರು. ನಗರದ ವಿವಿಧ ಮಸೀದಿಗಳು ಹಾಗೂ ಜಿಲ್ಲೆಯ ಇತರ ಭಾಗಗಳಿಗೆ ತೆರಳಿ ಇವರು ಧರ್ಮಪ್ರಚಾರ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಗಾಂಧಿಗಂಜ್​ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.
ವೀಸಾ ನಿಯಮ ಉಲ್ಲಂಘನೆ ಸೇರಿ ವಿವಿಧ ಆರೋಪಗಳಲ್ಲಿ ಒಟ್ಟು ನಾಲ್ಕು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮಾರ್ಚ್​ 10ರಂದು ಬೀದರ್​ಗೆ ಬಂದಿರುವ ಇವರೆಲ್ಲರೂ ಧರ್ಮ ಪ್ರಚಾರದಲ್ಲಿ ತೊಡಗಿದ್ದರು. ನವದೆಹಲಿಯ ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ನಲ್ಲೂ ಪಾಲ್ಗೊಂಡಿದ್ದರು. ಬಳಿಕ ಬೀದರ್​ ನಗರಕ್ಕೆ ಮರಳಿ ಮತ್ತು ಧರ್ಮ ಪ್ರಚಾರದಲ್ಲಿ ತೊಡಗಿದ್ದರು. ಸದ್ಯ ಇವರೆಲ್ಲರನ್ನೂ ರಟಕಲಪುರಾ ಮರ್ಕಜ್​ನಲ್ಲಿ ವ್ಯವಸ್ಥೆ ಮಾಡಿರುವ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.