ಕಾಮನ್‌ವೆಲ್ತ್ ಯೂತ್ ಕೌನ್ಸಿಲ್ ವತಿಯಿಂದ ಶ್ರೀಲಂಕಾದ ಮಾಜಿ ಸಚಿವ ಹರಿನ್ ಫರ್ನಾಂಡೊ ನೇತೃತ್ವದ ಯುವ ನಿಯೋಗ ಶುಕ್ರವಾರ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರನ್ನು ಭೇಟಿ ಮಾಡಿ ಪರಿಷತ್ತಿನ ಸದನ ಕಾರ್ಯಕಲಾಪಗಳ ಕುರಿತು ಮಾಹಿತಿ ಪಡೆಯಿತು. 
ನ್ಯೂಸ್

ಸಭಾಪತಿ ಸಲೀಂ ಅಹ್ಮದ್ ಅವರನ್ನ ಭೇಟಿ ಮಾಡಿದ ಕಾಮನ್‌ವೆಲ್ತ್ ಯೂತ್ ಕೌನ್ಸಿಲ್

ವಿಧಾನ ಪರಿಷತ್‌ನ ಸದನದ ಕಾರ್ಯಕಲಾಪಗಳ ಕುರಿತು ಮಾಹಿತಿ ನೀಡಿದ ಸಭಾಪತಿ

ಬೆಂಗಳೂರು : ಕಾಮನ್‌ವೆಲ್ತ್ ಯೂತ್ ಕೌನ್ಸಿಲ್ ವತಿಯಿಂದ ಶ್ರೀಲಂಕಾದ ಮಾಜಿ ಸಚಿವ ಹರಿನ್ ಫರ್ನಾಂಡೊ ನೇತೃತ್ವದ ಯುವ ನಿಯೋಗದ ಸದಸ್ಯರು ಶುಕ್ರವಾರ ವಿಧಾನಸೌಧದಲ್ಲಿ ವಿಧಾನ ಪರಿಷತ್‌ನ ಸಭಾಪತಿ ಸಲೀಂ ಅಹ್ಮದ್ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಭಾರತ- ಶ್ರೀಲಂಕಾ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು, ಯುವ ಜನರ ಸಬಲೀಕರಣ ಹಾಗೂ ಪರಸ್ಪರ ಸಹಕಾರದ ಅವಕಾಶಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಬಳಿಕ ಯುವ ನಿಯೋಗವು ವಿಧಾನ ಪರಿಷತ್ತಿನ ಸದನಕ್ಕೆ ಭೇಟಿ ನೀಡಿ ಸದನದ ಕಾರ್ಯಕಲಾಪಗಳ ಕುರಿತು ಸಲೀಂ ಅಹ್ಮದ್ ಅವರಿಗೆ ಮಾಹಿತಿ ಪಡೆಯಿತು.

ಈ ವೇಳೆ ಕಾಮನ್‌ವೆಲ್ತ್ ಯೂತ್ ಕೌನ್ಸಿಲ್‌ನ ಉಪಾಧ್ಯಕ್ಷ ಗುರುಜಿತ್ ಸಿಂಗ್, ಪ್ರೊ.ಶ್ರೀನಿವಾಸ್, ಸೋನಿಯಾ ದೇಶಮುಖ್, ಸುಚಿತ್ ಶಿಂಧೆ, ಮೇಘನಾ ಮೂರ್ತಿ,ಸಂಜಯ್ ಬಿರಾದರ್ ಸೇರಿದಂತೆ ಇತರರು ಇದ್ದರು.