ನ್ಯೂಸ್

ನಿಗಮ/ಮಂಡಳಿ ನಿರ್ದೇಶರು, ಸದಸ್ಯರ ಆಯ್ಕೆಗೆ ಸಮಿತಿ

ಬೆಂಗಳೂರು: ರಾಜ್ಯದ ವಿವಿಧ ನಿಗಮ/ಮಂಡಳಿಗಳಿಗೆ ನಿರ್ದೇಶಕರು/ ಸದಸ್ಯರನ್ನು ನೇಮಿಸಲು ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

ಈಗಾಗಲೆ ರಾಜ್ಯದಲ್ಲಿ ವಿವಿಧ ನಿಗಮ/ಮಂಡಳಿಗಳಿಗೆ ಸರ್ಕಾರ ಅಧ್ಯಕ್ಷರು, ಉಪಾಧ್ಯಕ್ಷರುಗಳನ್ನು ನೇಮಿಸಿದೆ. ಈ ನಿಗಮ ಮತ್ತು ಮಂಡಳಿಗಳಿಗೆ ಸದಸ್ಯರು/ನಿರ್ದೇಶಕರನ್ನು ಆಯ್ಕೆ ಮಾಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ರಿಜ್ವಾನ್ ಅರ್ಷದ್ ಸಮಿತಿ ಸದಸ್ಯರಾಗಿದ್ದಾರೆ. ಸಮಿತಿ ಕೂಡೇ ಕಾರ್ಯಪ್ರವೃತ್ತವಾಗಿ ಒಂದು ತಿಂಗಳ ಒಳಗೆ ನಿರ್ದೇಶಕರು/ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.