ನ್ಯೂಸ್

LPG Cylinder Price; ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ

ನವದೆಹಲಿ: ವಾಣಿಜ್ಯ ಬಳಕೆ ಸಿಲಿಂಡರ್​ ದರವನ್ನು ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ 100 ರೂಪಾಯಿ ಇಳಿಸಿದ್ದರೆ, ಬೇರೆಡೆ ಸುಮಾರು 93 ರೂಪಾಯಿ ಕಡಿತ ಮಾಡಲಾಗಿದೆ. ಗೃಹ ಬಳಕೆ ಸಿಲಿಂಡರ್​ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 100 ರೂ.ನಷ್ಟು ಅಗ್ಗವಾಗಿದೆ. ಮಂಗಳವಾರದಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 99.75 ರೂ. ಇಳಿಕೆಯಾಗಿದೆ. 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 99.75 ರೂ. ಕಡಿತವಾಗಿದೆ. ಈ ಹಿನ್ನೆಲೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಮಾರಾಟ ಬೆಲೆ 1,680 ರೂ. ಆಗಿದೆ. ಈ ಬೆಲೆ ಇಳಿಕೆ ಕೇವಲ ವಾಣಿಜ್ಯ ಸಿಲಿಂಡರ್​ಗಳಿಗೆ ಮಾತ್ರ ಅನ್ವಯವಾಗಲಿದೆ. ವ್ಯಾಪಾರಿ, ಹೋಟೆಲ್​ ವರ್ಗದವರಿಗೆ ಬೆಲೆ ಇಳಿಕೆ ಕೊಂಚ ಸಮಾಧಾನ ತಂದಿದೆ ಎಂದು ಹೇಳಬಹುದು.

ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,680 ರೂಪಾಯಿ ಆಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ 1,802 ರೂಪಾಯಿ, ಮುಂಬೈನಲ್ಲಿ 1,640 ರೂಪಾಯಿ ಮತ್ತು ಚೆನ್ನೈನಲ್ಲಿ 1,852 ರೂಪಾಯಿ ಆಗಿದೆ. ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ಕೊನೆಯ ಬಾರಿ ಮಾರ್ಚ್​ನಲ್ಲಿ ಸಿಲಿಂಡರ್ ಬೆಲೆ ಬದಲಾಗಿತ್ತು. ಸದ್ಯ 14.2 ಕೆಜಿ ಸಿಲಿಂಡರ್ ಬೆಲೆ 1,103 ರೂಪಾಯಿ ಇದೆ.