ನ್ಯೂಸ್

ಹೆಣ್ಣು ಮಗುವಿಗೆ ಜನ್ಮ ನೀಡಿದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ನಟಿ ನಯನಾ ನವೆಂಬರ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ ಪತಿ ಮಗು ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.  ನೆಟ್ಟಿಗರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

'ನನ್ನ ಜೀವನದ ಮುಖ್ಯವಾದ ವ್ಯಕ್ತಿಗಳು ಒಂದೇ ಫ್ರೇಮ್‌ನಲ್ಲಿದ್ದಾರೆ. ಮನೆಗೆ ಸ್ವಾಗತ ನಮ್ಮ ಮುದ್ದಾ ಲಕ್ಷ್ಮಿ' ಎಂದು ನಯನಾ ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ನಯನಾ ಅವರ ಪತಿ ಮಗುವನ್ನು ಮುದ್ದಾಡುತ್ತಿದ್ದಾರೆ. ಕೈಯಲ್ಲಿ ಕಂದಮ್ಮಾಳನ್ನು ಹಿಡಿದು ನಗುತ್ತಿರುವ ಫೋಟೋ ನೆಟ್ಟಿಗರಿಗೆ ಇಷ್ಟವಾಗಿದೆ. 'ನವೆಂಬರ್‌ನಲ್ಲಿ ಹುಟ್ಟಿದ ಕನ್ನಡಾಂಬೆಗೆ ಶುಭವಾಗಲಿ' ಹಾಗೂ 'ಹೆಣ್ಣು ಮಗು ಬೇಕು ಅನ್ನೋದು ಎಲ್ಲರ ಆಸೆ ಅದರಂತೆ ಲಕ್ಷ್ಮಿ ಬಂದಿದ್ದಾಳೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನಟಿ ನಯನಾ 2018ರ ಏಪ್ರಿಲ್‌ನಲ್ಲಿ ಧರ್ಮಸ್ಥಳದಲ್ಲಿ ಶರತ್‌ ಜತೆ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದರು. ಆಪ್ತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.  ಸೀರಿಯಲ್‌ ಮೂಲಕವೂ ಅತ್ಯುತ್ತಮ ನಟನೆ ನೀಡುತ್ತಿರುವ ನಯನಾ ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ.