ಬೆಂಗಳೂರು: ( Manju Pavagada Wedding ) 'ಬಿಗ್ ಬಾಸ್ ಕನ್ನಡ 8'ರ ವಿನ್ನರ್ (Bigg Boss Kannada 8) ಮಂಜು ಪಾವಗಡ (Manju Pavagada) ಅವರು ನಂದಿನಿ (Nandini) ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದ್ವೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಗುರು ಹಿರಿಯರ ಸಮ್ಮುಖದಲ್ಲಿ ಮಂಜು ಮತ್ತು ನಂದಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಪಾವಗಡದಲ್ಲಿ ಮದುವೆ ಸಮಾರಂಭ ನಡೆದಿದೆ.ನಿನ್ನೆ ಮತ್ತು ಇವತ್ತು ಮದುವೆ ಕಾರ್ಯಕ್ರಮಗಳು ನಡೆದವು. ಇದೀಗ ಮಂಜು ಪಾವಗಡ ಮದುವೆ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳು, ಗಣ್ಯರು ಶುಭ ಹಾರೈಸುತ್ತಿದ್ದಾರೆ. ಮಂಜು ಅವರ ಕೈಹಿಡಿದ ಹುಡುಗಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾರೆ. ಕನ್ನಡ ಕಿರುತೆರೆ ನಟ, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ ದಾಂಪತ್ಯ ಖ್ಯಾತಿಯನ್ನು ಹೊಂದಿದ್ದಾರೆ.
ಇತ್ತೀಚೆಗೆ ಮಂಜು ಪಾವಗಡ ಅವರು ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಗೆ ಪ್ರವೇಶಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹೊಸ ಮನೆಯ ಫೋಟೋ ವೈರಲ್ ಆಗಿತ್ತು. ಈ ಮನೆಗೆ ನಟ ರಾಜೀವ್, ಅಂಕಿತಾ, ಗಿಚ್ಚಿಗಿಲಿ ಗಿಲಿ ಕಲಾವಿದರು ಸೇರಿ ಹಲವು ಮಂದಿ ಆಗಮಿಸಿ ಶುಭ ಹಾರೈಸಿದ್ದರು. ಮಂಜು ಪಾವಗಡ ಅವರು ಅಂತರಪಟ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ತನ್ನ ವಯಸ್ಸಿಗೂ ಮಿರಿದ ಪಾತ್ರದಲ್ಲಿ ನಟಿಸಿದ್ದರು.