ಎಸ್.ಎನ್.ನಾರಾಯಣಸ್ವಾಮಿ 
ನ್ಯೂಸ್

ಮನೆಗೆ ಬಂದು ವಾಚಮ್ಯಾನ್ ಕೆಲಸ ಮಾಡಲಿ

ಕೋಲಾರ: ಸಂಸದ ಎಸ್.ಮುನಿಸ್ವಾಮಿ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ, ಹಿಂದೆ ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಭೀತುಪಡಿಸುವಲ್ಲಿ ವಿಫಲವಾಗಿದ್ದು, ವಾಚಮ್ಯಾನ್ ಕೆಲಸ ಖಾಲಿಯಿದ್ದು ಬಂದು ಕೆಲಸ ಮಾಡಲಿ, ಮುಂದಿನ ಚುನಾವಣೆಯಲ್ಲಿ ಠೇವಣಿಯನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ, ಜನನೇ ಸೋಲಿಸುತ್ತಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸವಾಲು ಹಾಕಿದರು.

ನಗರದಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಜೀವನದಲ್ಲಿ ಒಂದು ಪ್ರಕರಣವನ್ನು ಹಾಕಿಸಿಕೊಂಡಿಲ್ಲ, ಅತ್ಯಂತ ಪ್ರಮಾಣಿಕವಾಗಿ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ, ಇಂತಹ ಗೊಡ್ಡು ಬೆದರಿಕೆಗಳಿಗೆ ಬೆದರುವವರು ಯಾರು ಇಲ್ಲ ಎಂದರು.
ಸಂಸದ ಮುನಿಸ್ವಾಮಿ ಜನಪ್ರತಿನಿಧಿ ಎಂಬುದನ್ನು ಮರೆತು ವರ್ತಿಸುತ್ತಿದ್ದಾರೆ, ಅವರಿಗೆ ಘನತೆ, ಗೌರವವಿಲ್ಲ, ನನ್ನನ್ನು ಭೂಗಳ್ಳ ಎಂದು ಸಾವಿರ ಸಾರಿ ಹೇಳಿದ್ದಾರೆ, ಹಿಂದೆ ನಾಲ್ಕು ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಯಾಕೆ ಕ್ರಮಕೈಗೊಳ್ಳಲು ಆಗಲಿಲ್ಲ ಎಂದು ಪ್ರಶ್ನಿಸಿದರು.
ಸಚಿವರ ಅಕ್ಕಪಕ್ಕದಲ್ಲಿ ನಾನು ಮತ್ತೊಂದು ಕಡೆ ಕೊತ್ತೂರು ಮಂಜುನಾಥ್ ಕುಳಿತಿಕೊಂಡಿದ್ದೇವು, ಅವರು ನಮ್ಮನ್ನು ಗುರಿಯಾಗಿಸಿಕೊಂಡು ಆರೋಪಿಸಿದ್ದಾರೆ. ನಾನು ಎಸ್‌ಎನ್ ಸಿಟಿ ನಿರ್ಮಾಣಕ್ಕೆ ಯಾವ ಸರ್ಕಾರಿ ಆಸ್ತಿಯನ್ನು ಕಬಳಿಸಿಲ್ಲ, ಯಾರ ಮಾತನ್ನೋ ಕೇಳಿಕೊಂಡು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸಿಎಂ ಮುಖ್ಯ ಕಾರ್ಯದರ್ಶಿಗಳ ಮೇಲೆ ಒತ್ತಡ ತಂಡು ದಯಾನಂದ್ ತಹಶೀಲ್ದಾರ್ ನೇಮಕ ಮಾಡಿಕೊಂಡು ಬಂದು ಇಲ್ಲ ಸಲ್ಲದ ಪಿತ್ತೂರಿ ನಡೆಸಿದರು, ಆದರೆ ಕ್ರಮವಹಿಸುವಲ್ಲಿ ತಿರುಗೇಟು ನೀಡಿದರು.
ನಾನು ಯಾವುದೇ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಸಾಭೀತು ಪಡಿಸಿದರೆ ಮುನಿಸ್ವಾಮಿ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ, ಸಾಭೀತುಪಡಿಸಲು ಅಗದಿದ್ದರೆ ನನ್ನ ಮನೆಯಲ್ಲಿ ವಾಚಮ್ಯಾನ್ ಕೆಲಸ ಖಾಲಿಯಿದ್ದು ಬಂದು ಸೇರಿಕೊಳ್ಳಲಿ ಎಂದು ಸವಾಲು ಹಾಕಿದರು.