ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿದ ಧಾರವಾಡ ಜಿ.ಪಂ. ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ನೇತೃತ್ವದ ಪರಿಸರ ಪ್ರೇಮ ತಂಡ. 
ನ್ಯೂಸ್

ಸರ್ಕಾರಿ ಶಾಲೆ- ಅಂಗನವಾಡಿಗಳಿಗೆ ಬಣ್ಣದರ್ಪಣೆ

ಮಂಜುನಾಥ ಎಸ್. ಅಂಗಡಿ ಧಾರವಾಡ

ಬಣ್ಣ ಮಾಸಿದ ಶಾಲೆ- ಅಂಗನವಾಡಿ ಕಟ್ಟಡಗಳಿಗೆ ಅಂಗನವಾಡಿಕಟ್ಟಡಗಳಿಗೆ ಕೆಎಎಸ್ ಅಧಿಕಾರಿಯೊಬ್ಬರುರಜಾ ದಿನದಲ್ಲಿ ಸ್ವತಃ ನಿಂತುಬಣ್ಣ ಬಳಿಯುತ್ತಾರೆ. ಸರ್ಕಾರಿಶಾಲೆಯಲ್ಲಿ ಕಲಿತ ತಾನು ಶಾಲೆಗಳಿಗಾಗಿಏನಾದರೂ ಮಾಡಬೇಕು ಎಂಬ ಇಂಗಿತದಪರಿಣಾಮವಾಗಿ ಅನೇಕ ವಿದ್ಯಾದೇಗುಲಗಳುವರ್ಣಮಯ ಚಿತ್ರಗಳಿಂದ ಕಂಗೊಳಿಸುವಂತಾಗಿದೆ.

ಧಾರವಾಡಜಿ.ಪಂ. ಉಪಕಾರ್ಯದರ್ಶಿ (ಡಿಎಸ್)ಮಲ್ಲಿಕಾರ್ಜುನ ತೊದಲಬಾಗಿಇಂಥ ಸೇವಾ ಕಾರ್ಯಕ್ಕಿಳಿದವರು.ವಿವಿಧ ಕ್ಷೇತ್ರಗಳ ಸಮಾನಮನಸ್ಕರು ಅವರಿಗೆ ಜತೆಯಾಗಿದ್ದಾರೆ.

ಮಲ್ಲಿಕಾರ್ಜುನತೊದಲಬಾಗಿ ಬಾಗಲಕೋಟೆ ಜಿಲ್ಲೆಜಮಖಂಡಿ ತಾಲೂಕು ಕವಟಗಿ ಗ್ರಾಮದವರು.ಸರ್ಕಾರಿ ಶಾಲೆಯಲ್ಲೇಓದಿ, ಪ್ರೌಢಶಾಲಾಶಿಕ್ಷಕರಾಗಿದ್ದರು. ನಿರಂತರಪರಿಶ್ರಮದಿಂದ 2016ರಲ್ಲಿಕೆಎಎಸ್ ತೇರ್ಗಡೆಯಾದರು.ಆತ್ಮತೃಪ್ತಿಗಾಗಿ2020ರಲ್ಲಿ ಅವರು ಶುರುಮಾಡಿದಸೃಜನಾತ್ಮಕ ಕಾರ್ಯ ಒಂದು ಆಂದೋಲನವಾಗಿಬೆಳೆಯುತ್ತಿದೆ. ಇದುವರೆಗೆ283 ಶಾಲೆ, ಅಂಗನವಾಡಿಗಳನ್ನುಸಿಂಗರಿಸಿದ್ದಾರೆ!

ಶಿವಮೊಗ್ಗ ಜಿ.ಪಂ. ಡಿ.ಎಸ್. ಆಗಿದ್ದಾಗ ಈ ಕಾರ್ಯ ಆರಂಭಿಸಿ, ಅಲ್ಲಿ 140 ಕಟ್ಟಡಗಳಿಗೆ ಬಣ್ಣ ಹಚ್ಚಿದ್ದಾರೆ. ಮುಂದೆ ಕೊಪ್ಪಳಕ್ಕೆ ವರ್ಗಾವಣೆಯಾದಾಗಲೂ ಸೇವೆ ಮುಂದುವರಿಸಿದರು. ಧಾರವಾಡ ಜಿಲ್ಲೆಯಲ್ಲಿ ಹೆಬ್ಬಳ್ಳಿ ಮತ್ತು ಮೊರಬ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ, ಹೆಬ್ಬಳ್ಳಿಯ ಉರ್ದು ಶಾಲೆ, ಹುಬ್ಬಳ್ಳಿ ಬೆಂಗೇರಿಯ ಸ.ಹಿ.ಪ್ರಾ. ಶಾಲೆ ಹಾಗೂ ಕುಂದಗೋಳ ತಾಲೂಕು ಹೊಸಕಟ್ಟೆಯ ಅಂಗನವಾಡಿಗೆ ಬಣ್ಣ ಹಚ್ಚಲಾಗಿದೆ.

ಹಲವರ ಸಾಥ್: ಮಲ್ಲಿಕಾರ್ಜುನ ಅವರು ಬಣ್ಣದರ್ಪಣೆಗೆ 'ಪರಿಸರ ಪ್ರೇಮ' ತಂಡ ಕಟ್ಟಿದ್ದಾರೆ. ಅವರ ಅಪ್ತ ಕಾರ್ಯದರ್ಶಿ ವೀರೇಶ ಹಿರೇಮಠ ಹಾಗೂ ಶಿಕ್ಷಕ ಎಲ್.ಐ. ಲಕ್ಕಮ್ಮನವರ ಇದರ ಸಂಚಾಲಕರಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಮಾರುತಿ ಬೀಳಗಿ, ಬಸವರಾಜ ಬಡಿಗೇರ, ಕೆ.ಬಿ. ಕುರಹಟ್ಟಿ, ಬಾಬಾಜಾನ ಮುಲ್ಲಾ, ಮಹಾಂತೇಶ ಹುಬ್ಬಳ್ಳಿ, ಬಿ.ಆರ್. ಜಕಾತಿ, ರವಿಚಂದ್ರನ್ ದೊಡ್ಡಿಹಾಳ, ಶ್ರೀನಿವಾಸ ವಾಲಿಕಾರ ಸೇರಿದಂತೆ 45 ಜನರು 'ಪರಿಸರ ಪ್ರೇಮ'ಕ್ಕೆ ಕೈ ಜೋಡಿಸಿದ್ದಾರೆ. 2 ಮತ್ತು 4ನೇ ಶನಿವಾರ ಅಥವಾ ಭಾನುವಾರ ಬಣ್ಣದರ್ಪಣೆ ಕಾರ್ಯ ನಡೆಸುತ್ತಿದ್ದಾರೆ.

ಹೆಣ್ಣು ಮಕ್ಕಳಿಗೆ ಸಸಿ ದತ್ತು

ಜಿಪಂ ಡಿ.ಎಸ್. ಅವರು ಬಣ್ಣದರ್ಪಣೆಗೆ ತಮ್ಮ ಕಿಸೆಯಿಂದ ಒಂದಿಷ್ಟು ಹಣ ವಿನಿಯೋಗಿಸುತ್ತಾರೆ. ಉಳಿದವರೂ ಕೈಲಾದಷ್ಟು ಹಣ ಕೂಡಿಸುತ್ತಾರೆ. ಕಟ್ಟಡ ಅಂದಗೊಳಿಸಿ ಅವರಣ ಗೋಡೆ ಮೇಲೆ ಕಲಿಕೆಗೆ ಪೂರಕ ಚಿತ್ರ ಬಿಡಿಸಲಾಗುತ್ತದೆ. ಇದಲ್ಲದೆ, ಶಾಲೆ-ಅಂಗನವಾಡಿ ಆವರಣದಲ್ಲಿ ಸನಿ ನೆಟ್ಟು ವಿದ್ಯಾರ್ಥಿನಿಯರ ಹೆಸರು ಬರೆದು ಅವರಿಗೆ ದತ್ತು ನೀಡಲಾಗುತ್ತದೆ. ಮಕ್ಕಳು 'ತಮ್ಮ' ಸಸಿಗಳಿಗೆ ನೀರುಣಿಸಿ ಪೋಷಿಸುವ ಜವಾಬ್ದಾರಿ ಅರಿತು ಉತ್ಸಾಹದಿಂದ ನೋಡಿಕೊಳ್ಳುತ್ತಿದ್ದಾರೆ.

ಶಿಕ್ಷಕರು, ಪಿಡಿಒಗಳಿಗೆ ಜವಾಬ್ದಾರಿ:

ಶಿಕ್ಷಕರನ್ನೂ ಪರಿಸರ ಪ್ರೇಮ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಸ್ವಚ್ಛತೆ ಕಾಪಾಡಿ, ಹಸಿರುಮಯ ವಾತಾವರಣ ನಿರ್ಮಿಸಿಕೊ ಳ್ಳುವಂತೆ ನಿರ್ದೇಶಿಸಲಾ ಗುತ್ತದೆ. ಆಗಾಗ ಭೇಟಿ ನೀಡಿ ಮೇಲುಸ್ತುವಾರಿ ನೋಡಿಕೊಳ್ಳಲು ಪಿಡಿಒಗಳಿಗೆ ಸೂಚಿಸಲಾಗುತ್ತಿದೆ. ಧಾರವಾಡದ ಅಕ್ಷರಮಾತೆ ಲೂಸಿ ಸಾಲ್ದಾನಾ ಅವರು ತಮ್ಮ ವೇತನದಲ್ಲಿ ಶಾಲೆಗಳ ಅಭಿವೃದ್ಧಿಗೆ ದತ್ತಿ ನೀಡುತ್ತಿರುವುದನ್ನು ಅರಿತ ಮಲ್ಲಿಕಾರ್ಜುನ ತೊದಲಬಾಗಿ ಅವರು, ತಾವು ಕಲಿತ ಸರ್ಕಾರಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ 1 ಲಕ್ಷ ರೂಪಾಯಿ ದತ್ತಿ ಇಟ್ಟಿರುವುದು ಮತ್ತೊಂದು ವಿಶೇಷ.

ಸರ್ಕಾರಿ ಶಾಲೆಗಳ ಸಬಲೀಕರಣ ನಮ್ಮ ತಂಡದ ಉದ್ದೇಶ. ಕಟ್ಟಡಗಳಿಗೆ ಬಣ್ಣ ಬಳಿದು ಕಲಿಕೆಗೆ ಪೂರಕ ಚಿತ್ರ ಬಿಡಿಸುವ ಕಾರ್ಯಕ್ಕೆ ಅನೇಕರು ಜತೆಯಾಗಿದ್ದಾರೆ. ಶಾಲಾ ಪರಿಸರ ಸ್ವಚ್ಛವಾಗಿದ್ದರೆ ಕಲಿಕೆಗೆ ಅನುಕೂಲ.

| ಮಲ್ಲಿಕಾರ್ಜುನ ತೊದಲಬಾಗಿ, ಧಾರವಾಡ ಜಿ.ಪಂ. ಉಪ ಕಾರ್ಯದರ್ಶಿ