ನ್ಯೂಸ್

ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ

ಹುಣಸೂರು: ರಥಸಪ್ತಮಿ ಅಂಗವಾಗಿ ಶನಿವಾರ ಪಟ್ಟಣದ ಶಾಸ್ತ್ರೀ ವಿದ್ಯಾಸಂಸ್ಥೆಯಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರ ನಡೆಸುವ ಮೂಲಕ ಗಮನ ಸೆಳೆದರು.

ಯೋಗ ಶಿಕ್ಷಕರಾದ ಸುಮತಿ ಹಾಗೂ ಪ್ರಮೋದ್ ನೇತೃತ್ವದಲ್ಲಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಮಕ್ಕಳು ಉತ್ಸುಕರಾಗಿ ಭಾಗವಹಿಸಿದ್ದರು. ಶಾಲೆಯಲ್ಲಿ ದಿನಂ ಪ್ರತಿ ಭೋದಿಸುವ ಯೋಗ ಶಿಕ್ಷಣದ ಕೌಶಲವನ್ನು ರಥಸಪ್ತಮಿ ದಿನದಂದು ಪ್ರದರ್ಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಕಾರ್ಯದರ್ಶಿ ರಾಧಾಕೃಷ್ಣ, ಶಿಕ್ಷಣದೊಂದಿಗೆ ಯೋಗವನ್ನು ಮಕ್ಕಳಿಗೆ ತಿಳಿಸುವು ದರಿಂದ ಆರೋಗ್ಯ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದಲೇ ನಡೆಯುತ್ತದೆ. ಹಾಗೇಯೇ ಜೀವನದಲ್ಲಿ ಬದುಕು ನಿತ್ಯ ನೂತನವಾಗಬೇಕಾದರೆ ಆರೋಗ್ಯ ಪ್ರಮುಖವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಂಯೋಜಕಿ ಸತ್ಯವತಿ, ಮುಖ್ಯಶಿಕ್ಷಕ ನಾಗರಾಜು, ಹಾಜರಿದ್ದರು.