ಎನ್.ಆರ್.ಪುರ: ಕಾಫಿ ಬೋರ್ಡ್ ಕಾಫಿ ಬೆಳೆಗಾರರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು, ಕಾಫಿ ಬೆಳೆಗಾರರು ಅದನ್ನು ಬಳಸಿಕೊಳ್ಳಬೇಕು ಎಂದು ಕೊಪ್ಪ ಕಾಫಿ ಮಂಡಳಿ ಹಿರಿಯ ಸಂರ್ಪಕಾಧಿಕಾರಿ ಡಾ.ಪ್ರಭುಗೌಡ ತಿಳಿಸಿದರು.
ಕಾಫಿ ಬೋರ್ಡ್, ಸಾಂಬಾರು ಮಂಡಳಿ, ಎನ್.ಆರ್.ಪುರ ತೋಟಗಾರಿಕೆ ಇಲಾಖೆ, ಸೋಷಿಯಲ್ ವೆಲ್‌ೇರ್ ಸೊಸೈಟಿ ಆಶ್ರಯದಲ್ಲಿ ಬುಧವಾರ ನಡೆದ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.
ಎಸ್ಸಿ , ಎಸ್ಟಿ ಸಮುದಾಯದ ಕಾಫಿ ಬೆಳೆಗಾರರಿಗೆ ಗೋದಾಮು, ಪಲ್ಪರ್ ಘಟಕ, ಮರು ನಾಟಿ ಮಾಡಲು ಶೇ.90 ರಷ್ಟು ಸಹಾಯ ಧನ ನೀಡಲಾಗುವುದು. ಸಾಮಾನ್ಯ ರೈತರಿಗೆ ಶೇ.40ರಷ್ಟು ಸಹಾಯ ಧನ ನೀಡಲಾಗುವುದು. 10 ಎಕರೆ ಒಳಗಿನ ರೈತರಿಗೆ ಮಾತ್ರ ಸಹಾಯ ಧನ ನೀಡಲಾಗುವುದು. ಆಸಕ್ತ ರೈತರು ಸೂಕ್ತ ದಾಖಲೆಗಳೊಂದಿಗೆ ಕೊಪ್ಪ ಕಾಫಿ ಬೋರ್ಡ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.
ಕೊಪ್ಪ ಸಾಬಾರು ಮಂಡಳಿ ಸಹಾಯ ನಿರ್ದೇಶಕ ದೀಪಕ್ ಜೋಳಿ ಮಾತನಾಡಿ, ಸಾಂಬಾರು ಮಂಡಳಿಯಿಂದ ಏಲಕ್ಕಿ, ಕಾಳುಮೆಣಸಿಗೆ ಸಹಾಯ ಧನ ನೀಡಲಾಗುವುದು. ಏಲಕ್ಕಿ ಬೆಳೆಗಾರರಿಗೆ ರೀ ಪ್ಲಾಂಟ್ ಮಾಡಲು ವರ್ಷಕ್ಕೆ 15 ಸಾವಿರ ರೂಗಳಂತೆ 2 ವರ್ಷ ನೀಡಲಾಗುವುದು. ಪ್ರತಿ ವರ್ಷ 50 ರೈತರಿಗೆ ಸಹಾಯ ಧನ ನೀಡಲಾಗುವುದು. ಕೆರೆ,ಬಾವಿ ನಿರ್ಮಿಸಲು ಸಾಮಾನ್ಯ ರೈತರಿಗೆ 30 ಸಾವಿರ ಹಾಗೂ ಎಸ್ಸಿ , ಎಸ್ಟಿ ಸಮುದಾಯಧ ರೈತರಿಗೆ 45 ಸಾವಿರ ರೂ. ಸಹಾಯಧನ ನೀಡಲಾಗುವುದು. ಕೊಪ್ಪ ತಾಲೂಕಿನ ಬೆಳೆಗೊಳದಲ್ಲಿ ಸಾಂಬಾರು ಮಂಡಳಿ ನರ್ಸರಿ ಇದ್ದು ಆಸಕ್ತ ರೈತರು ಸಾಂಬಾರು ಮಂಡಳಿಯನ್ನು ಸಂಪರ್ಕಿಸಿ ನರ್ಸರಿಯಲ್ಲಿ ಗಿಡ ಪಡೆಯಬಹುದು ಎಂದರು.
ಸೋಷಿಯಲ್ ವೆಲ್‌ೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್, ನಿರ್ದೇಶಕ ಾ.ಜೋಬಿಶ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ನವೀನ್, ಪ್ರಿನ್ಸಿ, ಶಶಿಕಲಾ, ಅಶ್ವಿನಿ ಇದ್ದರು.