ಬಾಳೆಹೊನ್ನೂರು: ಒತ್ತಡ ನಿವಾರಿಸಲು ನೌಕರರಿಗೆ ಕ್ರೀಡಾಕೂಟಗಳು ಪೂರಕ ಎಂದು ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಹೇಳಿದರು.
ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್‌ಯಿಂದ ಕಲಾರಂಗ ಕ್ರೀಡಾಂಗಣದಲ್ಲಿ ಭಾನುವಾರ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಅಫಿಶಿಯಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿ, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಮಹಮ್ಮದ್ ಇ್ತೆಖಾರ್ ಆದಿಲ್ ಮಾತನಾಡಿ, ಸರ್ಕಾರಿ ನೌಕರರನ್ನು ಸಮಾಜದಲ್ಲಿ ಗುರುತಿಸಿ ಕ್ರೀಡಾಕೂಟದ ಮೂಲಕ ಅವರಿಗೆ ಉತ್ತಮ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ. ಕ್ರೀಡಾಕೂಟಗಳು ಸಾಮರಸ್ಯ, ಶಾಂತಿ, ಸಂದೇಶ ಸಾರಲು ಪೂರಕವಾಗಿದೆ ಎಂದರು.
ಗುತ್ತಿಗೆದಾರ ಟಿ.ಎಂ.ಬಶೀರ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಆರ್‌ಎ್ಒ ಎಂ.ಸಂದೀಪ್, ಪೊಲೀಸ್ ಇಲಾಖೆಯ ನಾಗರಾಜ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ತೀರ್ಪುಗಾರ ಓ.ಡಿ.ಸ್ಟೀನ್, ಶೇಖರ್ ಇಟ್ಟಿಗೆ, ಜೇಸಿ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅಜಿತ್, ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಕಾರ್ಯಕ್ರಮ ನಿರ್ದೇಶಕ ಕೆ.ಪ್ರಶಾಂತ್‌ಕುಮಾರ್, ಕಿರಣ್ ನೆಲ್ಲಿಮಕ್ಕಿ ಇತರರಿದ್ದರು.
ಪಂದ್ಯಾವಳಿಯಲ್ಲಿ ಎನ್.ಆರ್.ಪುರ ಪೊಲೀಸ್ ತಂಡ ಚಾಂಪಿಯನ್ ಸ್ಥಾನದೊಂದಿಗೆ ನಗದು, ಟ್ರೋಫಿ ಪಡೆಯಿತು. ಬಾಳೆಹೊನ್ನೂರು ಪೊಲೀಸ್ ತಂಡ ರನ್ನರ್ ಸ್ಥಾನದೊಂದಿಗೆ ನಗದು, ಟ್ರೋಫಿ ಪಡೆಯಿತು. ಪಂದ್ಯಾವಳಿಯಲ್ಲಿ ಶಿಕ್ಷಕರ, ಮೆಸ್ಕಾಂ ನೌಕರರ, ಗ್ರಾಪಂ ನೌಕರರ, ಅರಣ್ಯ ಇಲಾಖೆ, ಪೊಲೀಸ್, ಆರೋಗ್ಯ ಇಲಾಖೆ ತಂಡಗಳು ಭಾಗವಹಿಸಿದ್ದವು.