ಬೆಂಗಳೂರು: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವನಾ ಆಯೋಗ ಈವರೆಗೆ ನಗದು ಸೇರಿದಂತೆ ಒಟ್ಟು 446.02 ಕೋಟಿ ರೂ. ವಸ್ತು ವಶಕಪಡಿಸಿಕೊಮಡಿದೆ.
ಪೊಲೀಸ್, ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಅಬಕಾರಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆಗಳು ದಾಳಿ ನಡೆಸಿ ಈ ಸ್ವತ್ತನ್ನು ಜ್ತು ಮಾಡಿವೆ.
ಈವರೆಗೆ ಒಟ್ಟು 96 ಕೋಟಿ ರೂ. ನಗದು, 178.32 ಕೋಟಿ ರೂ. ಬೆಲೆಯ ಮದ್ಯ, 11.36 ಕೋಟಿ ಬೆಲೆಯ ಡ್ರಗ್ಸ್, ಲ76.75 ಕೋಟಿ ಬೆಲೆ ಬಾಳುವ ಚಿನ್ನ, 1.18 ಕೋಟಿ ರೂ. ಮೌಲ್ಯದ ಬೆಳ್ಳಿ, 1.22 ಕೋಟಿ ರೂ. ಬೆಲೆಯ ವಜ್ರ, 8.64 ಕೋಟಿ ರೂ. ಮೊತ್ತದ ಉಚಿತ ಉಡುಗೊರೆ ಹಾಗೂ 72.55 ಕೋಟಿ ರೂ. ಬೆಲೆಯ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.