ನ್ಯೂಸ್

ಕೋಚಿಮುಲ್ ವಿಭಜನೆ ಕನಸು ನನಸು

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆಯಾಗಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ರಚನೆ ಗುರುವಾರ ಘೋಷಣೆಯಾಗಿದೆ. ಅಧಿಕೃತ ಆದೇಶವಷ್ಟೇ ಬಾಕಿ ಇದೆ.

ಕೋಚಿಮುಲ್ ವಿಭಜನೆ ಮಾಡಿ, ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ರಚನೆ ಮಾಡಬೇಕು ಎಂಬುದು ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ನಿರ್ದೇಶಕರ, ಹಾಲು ಉತ್ಪಾದಕರ ಬಹುಕಾಲದ ಬೇಡಿಕೆ ಈಗ ಈಡೇರಿದ್ದು, ಕನಸು ನನಸಾಗಿದೆ.

ಕೋಲಾರ ಜಿಲ್ಲೆಯಿಂದ ಪ್ರತ್ಯೇಕ ಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಽಗಳು ಆಸಕ್ತಿ ತೋರಿ ಕಳೆದ ಬಿಜೆಪಿ ಸರ್ಕಾರದ ಅವಽಯಲ್ಲಿ ವಿಭಜನೆ ಮಾಡಿ ಆದೇಶಿಸಿ, ಆಡಳಿತಾಽಕಾರಿಯನ್ನೂ ನೇಮಕ ಮಾಡಲಾಗಿತ್ತು. ಇದರಿಂದಾಗಿ ಪ್ರತ್ಯೇಕ ಒಕ್ಕೂಟಗಳಲ್ಲಿ ಚಟುವಟಿಕೆಗಳು ಸಹ ಮುಂದುವರಿದಿದ್ದವು. ಆದರೆ ಕೆಲ ಹಾಲಿ ನಿರ್ದೇಶಕರು ಅಧಿಕಾರದಲ್ಲಿ ಮುಂದುವರಿಯಲು ಆದೇಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಜತೆಗೆ ಸರ್ಕಾರದ ಮೇಲೆ ಒತ್ತಡ ಹೇರಿ ಹಿಂದಿನ ಸರ್ಕಾರದ ಆದೇಶವನ್ನು ರದ್ದುಗೊಳಿಸಿದರು. ನಂತರ ಅಽಕಾರದಲ್ಲಿ ಮುಂದುವರಿಯುವ ಅವಕಾಶ ಪಡೆದುಕೊಂಡರು.

ಕಳೆದ ಬಿಜೆಪಿ ಸರ್ಕಾರದ ಅವಽಯಲ್ಲಿ ಆಗಿದ್ದ ಆದೇಶವನ್ನೇ ಯಥಾವತ್ತಾಗಿ ಜಾರಿಗೊಳಿಸುವಂತೆ ನ್ಯಾಯಾಲಯವು ಆದೇಶಿದ್ದು, ಸರ್ಕಾರವು ಶೀಘ್ರದಲ್ಲೇ ಎರಡು ಒಕ್ಕೂಟಗಳಿಗೆ ಪ್ರತ್ಯೇಕ ಆಡಳಿತಾಕಾರಿಗಳನ್ನು ನೇಮಿಸಲಿದೆ. ನಂತರ ಒಕ್ಕೂಟಗಳಿಗೆ ಪ್ರತ್ಯೇಕ ಚುನಾವಣೆ ನಡೆಯಲಿದೆ. ಹಿಂದಿನ ಸರ್ಕಾರದ ಆದೇಶವನ್ನೇ ಎತ್ತಿ ಹಿಡಿದಿರುವುದು ವಿಶೇಷವಾಗಿದೆ.

ಬಾಕ್ಸ್...

* ಕೂಡಲೇ ಚುನಾವಣೆ ನಡೆಸಲು ಕ್ರಮವಹಿಸಲಿ

2022ರ ಜೂನ್ 26ರಂದು ಹಿಂದಿನ ಬಿಜೆಪಿ ಸರ್ಕಾರ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ರಚನೆ ಮಾಡಿ ಆದೇಶಿಸಿತ್ತು. ಈಗಲೂ ಆದೇ ಆದೇಶವನ್ನೇ ಮರು ಜಾರಿಗೊಳಿಸಲು ಆದೇಶಿಸಿದ್ದು, ಆರಂಭದಲ್ಲಿ ಚಟುವಟಿಕೆಗಳನ್ನು ನಡೆಸಲು ತೊಂದರೆ ಆಗಬಹುದು. ಈಗಾಗಲೇ ಮೆಗಾ ಡೇರಿಯಿದ್ದು, ಪ್ಯಾಕಿಂಗ್ ಘಟಕ ಇಲ್ಲದೆ ಇರುವುದರಿಂದ ಸ್ಪಲ್ಪ ದಿನ ಕೋಲಾರ ಒಕ್ಕೂಟದಿಂದಲೇ ಹಾಲು ಪ್ಯಾಕ್ ಮಾಡಿ ಕಳುಹಿಸಬೇಕಾಗುತ್ತದೆ. ಉಳಿದ ಹಣಕಾಸು ವ್ಯವಹಾರವೆಲ್ಲ ಚಿಕ್ಕಬಳ್ಳಾಪುರಕ್ಕೆ ಸಿಮೀತವಾಗಿ ನಡೆಯಲಿದೆ. ಆದಷ್ಟು ಬೇಗ ಚುನಾವಣೆಯಾದರೆ ಮಾತ್ರ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ನಿರ್ದೇಶಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

* ಕಾನೂನು ರೀತಿ ವಿಭಜನೆ

ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ಬಹುದಿನಗಳ ಕನಸು ನನಸಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಹಕಾರ ಸಚಿವರು ಮತ್ತು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರಕ್ಕೆ ಧನ್ಯವಾದಗಳು. ಈ ವಿಚಾರ ನ್ಯಾಯಾಲಯದಲ್ಲಿ ಇತ್ತು. ಆದ ಕಾರಣ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಸರ್ಕಾರ ಕಾನೂನು ರೀತಿ ವಿಭಜನೆಯ ತೀರ್ಮಾನ ಕೈಗೊಂಡಿದೆ. ಆಸ್ತಿ ವಿಭಜನೆ, ಮಾರುಕಟ್ಟೆ ಸೇರಿದಂತೆ ಎಲ್ಲ ವಿಚಾರಗಳು 3-4 ತಿಂಗಳಲ್ಲಿ ತೀರ್ಮಾನವಾಗಲಿದೆ ಎಂದು ಶಿಡ್ಲಘಟ್ಟ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.

ಕೋಟ್...

ಬಾಗೇಪಲ್ಲಿಯಲ್ಲಿ ಕೋಚಿಮುಲ್ ವಿಶೇಷÀ ಸಾಮಾನ್ಯ ಸಭೆ ಕರೆದು ವಿಭಜನೆಗೆ ಸಂಬAಽಸಿದAತೆ ತೀರ್ಮಾನ ಕೈಗೊಳ್ಳಲಾಗಿತ್ತು. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಯ ಮೂಲಕ ಸರ್ಕಾರ ಈ ಭಾಗದ ರೈತರ ಕಲ್ಯಾಣಕ್ಕೆ ಗಮನ ನೀಡಿದೆ.

- ವೆಂಕಟೇಶ್,ಕೋಚಿಮುಲ್, ಚಿಕ್ಕಬಳ್ಳಾಪುರ ನಿರ್ದೇಶಕ