ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜಗತ್ತಿನಾದ್ಯಂತ ನಡೆಯುವ ಅನೇಕ ಘಟನೆಗಳು ಕ್ಷಣಮಾತ್ರದಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತದೆ. ಕೇವಲ ನಮ್ಮ ಕೈಬೆರಳಿನಲ್ಲಿ ಪ್ರಪಂಚದ ಹಾಗು ಹೋಗುಗಳನ್ನು ತಿಳಿಯುವಂತ ಸಾಮರ್ಥ್ಯ ಇಂದಿನ ಟೆಕ್ನಾಲಜಿ ನಮಗೆಲ್ಲಾ ಒದಗಿಸಿಕೊಟ್ಟಿದೆ.
ಇದನ್ನೂ ಓದಿ: ನೈಋತ್ಯ ಪದವಿ-ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಿದ್ಧತೆ, ಚುನಾವಣಾ ಆಯೋಗದಿಂದ ಮತದಾರರ ನೋಂದಣಾಧಿಕಾರಿ ನೇಮಕ
ಆ ಪೈಕಿ ಅಂತರ್ಜಾಲ ಶಕ್ತಿಯೇ ಮುಂದು. ಎಲ್ಲಾ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೇಗವಾಗಿ ಹರಿದಾಡುವ ಮುಖೇನ ಹೆಚ್ಚೆಚ್ಚು ಶೇರ್ ಹಾಗೂ ಲೈಕ್ ಪಡೆದುಕೊಳ್ಳುವ ಜತೆಗೆ ತೀವ್ರ ಚರ್ಚೆಗೂ ಕಾರಣವಾಗುತ್ತದೆ.
ಇದೀಗ ಈ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಗೊಂಡಿದ್ದು, ವಿಷ ಸರ್ಪವೊಂದು ಮರಕ್ಕೆ ಕಟ್ಟಿಹಾಕಿದ್ದ ಎಮ್ಮೆಯ ಬಳಿ ಹರಿದುಕೊಂಡು ಬಂದಿದೆ. ಈ ವೇಳೆ ಗಾಬರಿಗೊಂಡ ಎಮ್ಮೆ ಹಗ್ಗ ಬಿಡಿಸಿಕೊಳ್ಳಲು ಹರಸಾಹಸ ಪಟ್ಟಿದೆ. ಆದ್ರೆ, ವಿಡಿಯೋದಲ್ಲಿ ಕಾಣುವಂತೆ ಸರ್ಪ ಎಮ್ಮೆಗೆ ದಾಳಿ ಮಾಡದೆ ತನ್ನ ಪಾಡಿಗೆ ಮರವನ್ನು ಹಾದು ಹೋಗಿದೆ. ಸದ್ಯ ಈ ಒಂದು ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಹಾವು ಹತ್ತಿರ ಬರುತ್ತಿದ್ದನ್ನು ಗಮನಿಸಿದ ಎಮ್ಮೆಯು ಕೂಡಲೇ ಕಟ್ಟಿಹಾಕಿದ್ದ ಹಗ್ಗದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಫಲವಾಗಿಲ್ಲ. ದಾಳಿ ಮಾಡದ ಸರ್ಪ, ಮರವನ್ನು ದಾಟಿ ಅಲ್ಲಿಂದ ಮುಂದೋಗಿದೆ. ಈ ಒಂದು ವಿಡಿಯೋ 'ಟಿಪ್ಟಾಪ್ಯಾತ್ರಾ' ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ,(ಏಜೆನ್ಸೀಸ್).