ರಾಜಸ್ಥಾನ: ಅಂಗಡಿಯ ಕಾರ್ಮಿಕನೊಬ್ಬ ಎಂದಿನಂತೆ ತನ್ನ ಕೆಲಸ ಮುಗಿಸಿ, ಕೋಣೆಯಲ್ಲಿ ನಿದ್ರಿಸಲು ತೆರಳಿದಾಗ ಹಾಸಿಗೆಯ ತಲೆದಿಂಬಿನ ಕೆಳಗೆ 5 ಅಡಿ ಉದ್ದದ ಸರ್ಪ ಕಂಡು ಬೆಚ್ಚಿಬಿದ್ದ ಘಟನೆ ರಾಜಸ್ಥಾನದ ಕೋಟಾದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ವಿಶ್ವ ಪವರ್ ಲಿಫ್ಟಿಂಗ್ ನಲ್ಲಿ ಆದರ್ಶ್ಗೆ ಚಿನ್ನದ ಪದಕ
ರಾಜಸ್ಥಾನದ ಕೋಟಾದಲ್ಲಿರುವ ಅಂಗಡಿಯ ಕೋಣೆಯೊಳಗೆ 5 ಅಡಿ ಉದ್ದದ ಹಾವನ್ನು ಕಂಡ ಸ್ಥಳೀಯ ಕೆಲಸಗಾರರೆಲ್ಲರೂ ಅಚ್ಚರಿಗೊಂಡಿದ್ದಾರೆ. ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾಮಾಶಾ ಮಂಡಿಯ ಅಂಗಡಿಯೊಂದಕ್ಕೆ ನುಗ್ಗಿದ ಸರ್ಪ, ಹಾಸಿಗೆಯ ದಿಂಬಿನ ಕೆಳಗೆ ಅವಿತುಕೊಂಡಿತ್ತು. ಇದನ್ನು ನೋಡಿದ ಕಾರ್ಮಿಕನು, ಕೂಡಲೇ ಸ್ಥಳಕ್ಕೆ ಉರಗ ರಕ್ಷಕರನ್ನು ಕರೆಸಿದ್ದಾರೆ.
ಸರ್ಪವನ್ನು ಸುರಕ್ಷಿತವಾಗಿ ಹಿಡಿದ ಉರಗ ರಕ್ಷಕರು, ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ,(ಏಜೆನ್ಸೀಸ್).