ವಿಶ್ವ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ಬಸಂತ್​ ರಜತ ಗೆಲ್ಲಲು ಕನ್ನಡತಿ ಸಹನಾ ಕುಮಾರಿ ನೆರವು! 
ನ್ಯೂಸ್

ವಿಶ್ವ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ಬಸಂತ್​ ರಜತ ಗೆಲ್ಲಲು ಕನ್ನಡತಿ ಸಹನಾ ಕುಮಾರಿ ನೆರವು!

ಯುಜೀನ್​ (ಅಮೆರಿಕ): ಭಾರತದ ಬಸಂತ್​ ಕುಮಾರ್​ ಮೇವಾಲ್​ ಮತ್ತು ಶಹನವಾಜ್​ ಖಾನ್​ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 19 ವರ್ಷದ ಬಸಂತ್​ ಹೈಜಂಪ್​ ಸ್ಪರ್ಧೆಯಲ್ಲಿ ಜಾಗತಿಕ ಮಟ್ಟದ ಪದಕ ಗೆದ್ದುಕೊಂಡ ಮೊದಲ ಭಾರತೀಯರೆನಿಸಿದ್ದಾರೆ. ಒಂದೇ ದಿನ ಅವಳಿ ಪದಕ ಗೆದ್ದುಕೊಂಡ ಭಾರತ, ಹಾಲಿ ಕೂಟದಲ್ಲಿ ಇದುವರೆಗೆ ಒಟ್ಟು 3 ಪದಕ ಜಯಿಸಿದಂತಾಗಿದೆ.

ಶನಿವಾರ ನಡೆದ ಪುರುಷರ ಹೈಜಂಪ್​ ಸ್ಪರ್ಧೆಯ ಫೈನಲ್​ನಲ್ಲಿ ಬಸಂತ್​ ವೈಯಕ್ತಿಕ ಶ್ರೇಷ್ಠ 2.21 ಮೀ. ಎತ್ತರ ಜಿಗಿದು ರಜತ ಪದಕಕ್ಕೆ ಕೊರಳೊಡ್ಡಿದರು. ಭಾರತೀಯ ನಾಕೌಸೇನೆಯ ಅವರು ಪಾಕ್​ ಗಡಿಯಲ್ಲಿರುವ ರಾಜಸ್ಥಾನದ ಅನುಪ್​ಗಢದವರಾಗಿದ್ದಾರೆ. ಅಲ್ಜೀರಿಯಾದ ಯೂನಸ್​ ಅಯಾಚಿ ಚಿನ್ನ ಮತ್ತು ಬ್ರಿಟನ್​ನ ಒಟಿಸ್​ ಪೂಲ್​ ಕಂಚು ಗೆದ್ದರು. ಪದಕ ವಿಜೇತ ಮೂವರೂ 2.21 ಮೀ. ಜಿಗಿದರು. ಮತ್ತು 2.24 ಮೀ. ಹಾರುವ ಮೂರೂ ಪ್ರಯತ್ನದಲ್ಲಿ ವಿಲರಾದರು. ಬಳಿಕ ಹಿಂದಿನ ಜಿಗಿತ ಪೂರ್ಣಗೊಳಿಸಲು ತೆಗೆದುಕೊಂಡ ಪ್ರಯತ್ನಗಳ ಆಧಾರದಲ್ಲಿ ಪದಕ ವಿಜೇತರ ಸ್ಥಾನ ನಿರ್ಧರಿಸಲಾಯಿತು. ಅಯಾಚಿ ಮೊದಲ ಯತ್ನದಲ್ಲೇ 2.21 ಮೀ. ಜಿಗಿದಿದ್ದರೆ, ಬಸಂತ್​ 2 ಮತ್ತು ಪೂಲ್​ 3ನೇ ಯತ್ನದಲ್ಲಿ ಈ ಎತ್ತರವನ್ನು ಯಶಸ್ವಿಯಾಗಿ ಹಾರಿದ್ದರು. ಕಿರಿಯರ ಅಥ್ಲೆಟಿಕ್ಸ್​ನಲ್ಲಿ ಭಾರತ ಈ ಹಿಂದೆ ಅನೇಕ ಪದಕ ಗೆದ್ದಿದ್ದರೂ, ಹೈಜಂಪ್​ನಲ್ಲಿ ಪದಕ ಒಲಿದಿದ್ದು ಇದೇ ಮೊದಲಾಗಿದೆ.

ಕನ್ನಡತಿ ಸಹನಾ ನೆರವು!

Sahana Kumari

) ನೆರವಾಗಿದ್ದಾರೆ. ಬಸಂತ್​ ಹಾಲಿ ಋತುವಿನಲ್ಲಿ ಸಹನಾ ಮಾರ್ಗದರ್ಶನದಲ್ಲಿ 10 ಸೆಂಟಿ ಮೀಟರ್​ನಷ್ಟು ಪ್ರಗತಿ ಸಾಧಿಸಿದ್ದು, 2.11ರಿಂದ 2.21 ಮೀ.ಗೆ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯನ್ನು ಸುಧಾರಿಸಿಕೊಂಡಿದ್ದಾರೆ.

ಶಹನವಾಜ್​ಗೆ ಕಂಚು
ಉತ್ತರ ಪ್ರದೇಶದ 18 ವರ್ಷದ ಶಹನವಾಜ್​ ಖಾನ್​ ಪುರುಷರ ಲಾಂಗ್​ಜಂಪ್​ ಸ್ಪರ್ಧೆಯ ಫೈನಲ್​ನಲ್ಲಿ ಗರಿಷ್ಠ 7.84 ಮೀ. ದೂರ ಜಿಗಿದು ಕಂಚಿನ ಪದಕ ಒಲಿಸಿಕೊಂಡರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಜತಿನ್​ ಅರ್ಜುನನ್​ 7.59 ಮೀ. ದೂರ ಜಿಗಿದು 8ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಶಹನವಾಜ್​ ಕೂಟದ ಪುರುಷರ ಲಾಂಗ್​ಜಂಪ್​ನಲ್ಲಿ ಪದಕ ಗೆದ್ದ ಮೊದಲ ಭಾರತೀಯರೆನಿಸಿದರು. 2021ರಲ್ಲಿ ಶೈಲಿ ಸಿಂಗ್​ ಮಹಿಳಾ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ಫೈನಲ್​ಗೆ ಮಹಿಳಾ ರಿಲೇ ತಂಡ
ಭಾರತದ ಮಹಿಳೆಯರ 4/400 ಮೀ. ರಿಲೇ ತಂಡ ಫೈನಲ್​ ಪ್ರವೇಶಿಸಿದೆ. ಭೂಮಿಕಾ ನೇಹಟೆ, ತಹುರ ಖತುನ್​, ತನು ಚೌಧರಿ ಮತ್ತು ಥಿಯಾ ಆರುಮುಗಂ ಒಳಗೊಂಡ ತಂಡ 3 ನಿಮಿಷ, 39.53 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಹೀಟ್ಸ್​-1ರಲ್ಲಿ 3ನೇ ಸ್ಥಾನ ಪಡೆದು, ನೇರವಾಗಿ ಪದಕ ಸುತ್ತಿಗೆ ಪ್ರವೇಶಿಸಿತು. ಮತ್ತೊಂದೆಡೆ ಭಾರತದ ಪುರುಷರ ಮತ್ತು ಮಹಿಳಾ 4/100 ಮೀ. ರಿಲೇ ತಂಡಗಳು ಫೈನಲ್​ಗೇರಲು ವಿಫಲವಾದವು.