ಹೊಳೆಹೊನ್ನೂರು: ಸಂಘದಲ್ಲಿ ನಡೆಯುವ ಸಭೆಗಳಿಗೆ ಸದಸ್ಯರು ತಪ್ಪದೇ ಹಾಜರಾಗಬೇಕು ಎಂದು ಶಿವಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಸಪ್ಪ ಹೇಳಿದರು.
ಸಮೀಪದ ಅರಹತೊಳಲು ಕೈಮರದಲ್ಲಿ ಶನಿವಾರ ಶಿವಪತ್ತಿನ ಸಹಕಾರ ಸಂಘದ 6ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘ ಲಾಭದಲ್ಲಿ ಮುಂದುವರಿಯುತ್ತಿರುವುದು ಆಶಾದಾಯಕ ಬೆಳವಣಿಗೆ. ಷೇರುದಾರರ ಸಂಖ್ಯೆ ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ. ಕಟ್ಟಡ ನಿಧಿ ಬಳಸಿಕೊಂಡು ಸಂಘಕ್ಕೆ ನೂತನ ಕಟ್ಟಡ ನಿರ್ಮಿಸಲಾಗುವುದು. ಷೇರುದಾರರು ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸಾಲವನ್ನು ಸಕಾಲದಲ್ಲಿ ಮರುಪಾವತಿಸಬೇಕು ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಉಪಾಧ್ಯಕ್ಷ ಎಚ್.ಎಂ. ಚಂದ್ರಪ್ಪ, ಪತ್ರೇಶಪ್ಪ, ತೀರ್ಥಯ್ಯ, ರುದ್ರೇಶಪ್ಪ, ಎಚ್.ಎನ್. ನಾಗರಾಜ್, ಶಿವರಾಜ್, ಕುಮಾರಸ್ವಾಮಿ, ನಟರಾಜ್‌ಗೌಡ, ಮಹಾದೇವಪ್ಪ, ಹನುಮಂತಪ್ಪ. ಎಚ್.ಜಿ.ಮಲ್ಲಯ್ಯ, ಬಿ.ಎನ್. ರೂಪಾ, ಸುಚಿತ್ರಾ, ಕೆ.ಎಸ್.ಜೀವನ್ ಇತರರಿದ್ದರು.