ನ್ಯೂಸ್

ಬೆಟಗೇರಿಯಲ್ಲಿ ಬೀರೇಶ್ವರ ಶಾಖೆ ಉದ್ಘಾಟನೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಉತ್ತಮ ಆಥಿರ್ಕ ವಹಿವಾಟಿನ ಮೂಲಕ ಸಹಕಾರ ರಂಗದಲ್ಲಿ ಉತ್ತಮ ಸಾಧನೆ ಮೆರೆದು ಕರ್ನಾಟಕ ಮತ್ತು ಮಹಾರಾಷ್ಷ್ರ ರಾಜ್ಯಗಳ ಜನರ ಪ್ರೀತಿಗೆ ಪಾತ್ರವಾಗಿ ಜನಮನ್ನಣೆ ಪಡೆದಿರುವ ಬೀರೇಶ್ವರ ಕೋ ಆಪ್​ ಕ್ರೆಡಿಟ್​ ಸೋಸೈಟಿಯ ಸೇವೆ ಶ್ಲಾನೀಯ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅತ್ಯುತ್ತಮ ಉದ್ಯಮದಾರ ಪ್ರಶಸ್ತಿ ಪುರಸತ ಶಿವಪ್ಪ ಮುಳಗುಂದ ಹೇಳಿದರು.
ಬೆಟಗೇರಿ ಭಾಗದ ಶರಣಬಸವೇಶ್ವರ ದೇವಸ್ಥಾನದ ಹತ್ತಿರದಲ್ಲಿ ರವಿವಾರ ಬೀರೇಶ್ವರ ಕೋ ಆಪ ಕ್ರೆಡಿಟ್​ ಸೊಸೈಟಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀರೇಶ್ವರ ಕೋ ಆಪ ಕ್ರೆಡಿಟ್​ ಸೋಸೈಟಿಯ 154 ಶಾಖೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಜನಸೇವೆಯಲ್ಲಿ ತೊಡಗಿವೆ. ಈ ಸೋಸೈಯಟಿಯಲ್ಲಿ ಈಗಾಗಲೇ 3.53 ಲ ಸದಸ್ಯರಿದ್ದಾರೆ. 3373 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹವಾಗಿದೆ. 2606 ಕೋಟಿ ರೂ ಸಾಲವನ್ನು ನೀಡಿದೆ. ಈ ಸೋಸಾಯೈಟಿ ಜನಸ್ನೇಹಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ ಎಂದರು.
ವಿಜಯಲಕ್ಷಿ$್ಮ ಅಂಗಡಿ, ಎಸ್​. ಎಸ್​. ಪಟ್ಟಣಶೆಟ್ಟಿ, ಎಂ. ಎಸ್​. ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಕಿರಣ ಚೌಗಲೆ, ಹುಚ್ಚಪ್ಪ ಶಹಪೂರ, ರಾಹುಲ್​ ಹಲಕಾಟೆ, ವೀರನಗೌಡ ಮರಿಗೌಡ ಇತರರು ಇದ್ದರು.