ನ್ಯೂಸ್

ಸಿಎಂ ರಾಜೀನಾಮೆ ವಿರೋಧ ಪಕ್ಷಗಳ ಸೃಷ್ಟಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ನ್ಯಾಯಾಲಯವು ಹೇಳಿಲ್ಲ. ಇದನ್ನು ವಿರೋಧ ಪಕ್ಷದವರು ಸೃಷ್ಟಿಸಿರುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿರಾರೊಂದಿಗೆ ಮಾತನಾಡಿ, ವಿರೋಧ ಪಕ್ಷದವರಿಗೆ ಮಾತನಾಡಿಕೊಳ್ಳಲು ಯಾವುದೇ ವಿಚಾರವಿಲ್ಲ. ಅವ್ಯವಹಾರ ನಡೆಯದಿದ್ದರು ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಸಿಎಂಗೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಮುಡಾ ವಿಚಾರವು ನ್ಯಾಯಾಲಯದಲ್ಲಿದ್ದು, ತೀಮಾರ್ನ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಪತಿಯ ನೆಮ್ಮದಿ ಹಾಗೂ ಸಚ್ಚಾರಿತ್ರವೇ ಮುಖ್ಯವೆಂದು ಪಾರ್ವತಮ್ಮ ನಿವೇಶನಗಳನ್ನು ವಾಪಸ್​ ನೀಡಿದ್ದಾರೆ ಎಂದು ತಿಳಿಸಿದರು.
ಈ ಮೊದಲೇ ನಿವೇಶನ ವಾಪಸ್​ ನೀಡಲು ಯೋಚಿಸಿದ್ದೆ, ವಿರೋಧ ಪಕ್ಷಗಳ ಆರೋಪಗಳನ್ನು ಧೈರ್ಯವಾಗಿ ಎದುರಿಸಲು ಸಿದ್ಧರಾಗಿದ್ದರು. ಆದರೆ, ಈ ಬೆಳವಣಿಗೆ, ಕಿರುಕುಳದಿಂದ ಬೇಸತ್ತು ವಾಪಸ್​ ನೀಡಿರುವುದಾಗಿ ಪಾರ್ವತಮ್ಮ ಅವರೇ ಪತ್ರದಲ್ಲಿ ತಿಳಿಸಿದ್ದಾರೆ ಎಂದರು.
ತಮ್ಮ ಪತಿಯವರಿಗೆ ನನ್ನಿಂದಾಗಿ ಅಘಾತ, ನೋವಾಗಿದೆ. ಕಪ್ಪುಚುಕ್ಕೆಯಿಲ್ಲದ ರಾಜಕೀಯ ಜೀವನ ಅವರದ್ದಾಗಿದ್ದು, ನ್ಯಾಯಯುತವಾಗಿ ನನಗೆ ನಿವೇಶನಗಳು ಬಂದಿದ್ದರೂ ಸಹ ಇವುಗಳಿಂದಲೇ ಅವರಿಗೆ ವಿರೋಧ ಪಕ್ಷದವರು ನೋವುಂಟು ಮಾಡುತ್ತಿದ್ದಾರೆಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಇವು ನನಗೆ ತೃಣಕ್ಕೆ ಸಮಾನವಾಗಿದ್ದು, ಪತಿಯವರ ನೆಮ್ಮದಿ, ಸಚ್ಚಾರಿತ್ರ ಮುಖ್ಯ ಎಂದು ತಿಳಿಸಿದ್ದಾರೆ ಎಂದರು.
ಪ್ರಕರಣ ವಿಚಾರವಾಗಿ ಎಚ್​.ಡಿ.ಕುಮಾರಸ್ವಾಮಿ ಹಿಟ್​ ಅಂಡ್​ ರನ್​ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಿಟ್​ ಅಂಡ್​ ರನ್​ ಎಂದರೆ ಹೇಳಿದ ಮಾತು ಬದಲಾಯಿಸುವುದು. ಹೀಗಾಗಿ ಮುಡಾ ಪ್ರಕರಣಕ್ಕೂ ಹಿಟ್​ ಅಂಡ್​ ರನ್​ಗೂ ಸಂಬಂಧವೇ ಇಲ್ಲ. ಇಡೀ ಪ್ರಕರಣವು ಸಿದ್ದರಾಮಯ್ಯರ ಪತ್ನಿಗೆ ಸಂಬಂಧಪಟ್ಟಿದ್ದು, ಅವರ ಹೆಸರಿನಲ್ಲಿ ನಿವೇಶನಗಳಿವೆ, ಅವರು ಸರ್ವ ಸ್ವತಂತ್ರರು ವಾಪಸ್ಸಿಗೆ ಒಪ್ಪಿದ್ದಾರೆ. ಇಡಿ ಪ್ರಕರಣ 2 ದಿನಗಳ ಹಿಂದೆಯಷ್ಟೇ ದಾಖಲಾಗಿದೆ. ಕಾನೂನಾತ್ಮಕ ಹೋರಾಟಗಳು ನಡೆಯುತ್ತವೆ ಎಂದು ಹೇಳಿದರು.

ಯಾವುದೇ ಅಭಿವೃದ್ಧಿ ಕೆಲಸ ನಿಂತಿಲ್ಲ
ಸ್ಪಷ್ಟ ಬಹುಮತ ಇರುವ ಸರ್ಕಾರವನ್ನು ಉರುಳಿಸುವುದಕ್ಕೂ ಯತ್ನಾಳ್​ ಅವರು ನೀಡಿರುವ ಹೇಳಿಕೆ ಬಗ್ಗೆ ತನಿಖೆಯಾಗಲಿ ಎಂದು ತಿಳಿಸಿದರು.
ಇನ್ನು ರಾಜ್ಯ, ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕಾರ್ಯ ನಿಂತಿದೆ ?, ಯಾವುದೇ ಸರ್ಕಾರ ಮಾಡದಿರುವ ಕೆಲಸಗಳು ನಮ್ಮ ಅವಧಿಯಲ್ಲಿ ನಡೆಯುತ್ತಿದೆ. ಗ್ಯಾರೆಂಟಿ ಯೋಜನೆಗಳೂ ಉತ್ತಮವಾಗಿವೆ. ಗೃಹಲಕ್ಷಿ$್ಮ ಹಾಗೂ ಅನ್ನಭಾಗ್ಯದ ಪ್ರೋತ್ಸಾಹ ಹಣವು ದಸರಾ ಹಬ್ಬದೊಳಗೆ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ಮಳೆಯಾಗಿಲ್ಲ, ಕೆಸಿವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ರಾಗಿ ಬೆಳೆ ನಷ್ಟದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಆ ಬಳಿಕ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಸಮಸ್ಯೆಯನ್ನು ಬಗೆಹರಿಸುತ್ತೇನೆ
ಇಚೆಗೆ ನಡೆದ ಕಾಂಗ್ರೆಸ್​ ಸಂನಾ ಸಭೆಯಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕುಟುಂಬ ಎಂದ ಮೇಲೆ ಅಣ್ಣ ತಮ್ಮಂದಿರ ಜಗಳ ಇದ್ದೇ ಇರುತ್ತದೆ. ನೂರಾರು ಜನರಿದ್ದಾಗ ಗಲಾಟೆಯಾಗಿದೆ, ಇದನ್ನು ಬಗೆಹರಿಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಕೆಲವರಿಗೆ ಟಿಕೆಟ್​ ಬೇಕಾಗಿತ್ತು, ಇನ್ನೊಬ್ಬರಿಗೆ ಬೇರೆ ಅಭ್ಯರ್ಥಿ ಬೇಕಾಗಿತ್ತು. ಈ ಭಿನ್ನಾಭಿಪ್ರಾಯಗಳಿಂದಾಗಿ ಸಭೆಯಲ್ಲಿ ಗಲಾಟೆ ನಡೆದಿದೆ ಎನ್ನುವುದು ನನ್ನ ಅಭಿಪ್ರಾಯ. ಇಬ್ಬರನ್ನೂ ಕೂರಿಸಿ ಮಾತನಾಡಿ, ಸಣ್ಣ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್​ ಸಂಘಟನಾ ಸಭೆಯಲ್ಲಿ ಸಣ್ಣ ಗಲಾಟೆಯಾಗಿದ್ದು, ಅಂದು ನಾನು ಕೊಡಗು ಜಿಲ್ಲೆಗೆ ತೆರಳಿದ್ದೆ. ಕಾಂಗ್ರೆಸ್​ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಹೀಗಾಗಿ ಎರಡೂ ಗುಂಪುಗಳನ್ನು ಸೇರಿಸಿ ಮುಂದಿನ ದಿನಗಳಲ್ಲಿ ಒಗ್ಗೂಡಿಸಿಕೊಂಡು ಹೋಗಲಾಗುವುದು ಎಂದರು.