ಉತ್ತರಪ್ರದೇಶ: ರಾಜ್ಯದ ರಸ್ತೆಗಳಲ್ಲಿ ಅಡ್ಡಾಡುತ್ತಿರುವ ಬಿಡಾಡಿ ದನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತವಾದ ಆಶ್ರಯ ವ್ಯವಸ್ಥೆ ಮತ್ತು ಅದರ ಸಂಪೂರ್ಣ ನಿರ್ವಹಣೆಯನ್ನು ಮಾಡಿ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಆಗಸ್ಟ್ 27) ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ರಾಜ್ಯ ಸರ್ಕಾರವು ನಿರ್ಗತಿಕ ಜಾನುವಾರುಗಳನ್ನು ಅಸ್ತಿತ್ವದಲ್ಲಿರುವ ಗೋಶಾಲೆಗಳಿಗೆ ಕೊಂಡೊಯ್ಯಲು ಮತ್ತು ಅವುಗಳ ಆವರ್ತಕ ಆರೋಗ್ಯ ತಪಾಸಣೆ ಮತ್ತು ಹಸಿರು ಮೇವಿನ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸುತ್ತೋಲೆಯ ಮೂಲಕ ಸೂಚಿಸಿದ್ದಾರೆ.
ರಾಜ್ಯಾದ್ಯಂತ ಗೋಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ, ರಾಜ್ಯದಲ್ಲಿ ಗೋಶಾಲೆ ಸೌಲಭ್ಯಗಳನ್ನು ವಿಸ್ತರಿಸಲು ಪಶುಸಂಗೋಪನಾ ಇಲಾಖೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ ಪ್ರಸ್ತುತಪಡಿಸುವಂತೆ ಹೇಳಿದ್ದಾರೆ. ಆಶ್ರಯ ಮನೆಗಳನ್ನು ಸ್ಥಾಪಿಸಲು ಬಜೆಟ್‌ಗೆ ಅನುಮೋದನೆಗಾಗಿ ಸಚಿವ ಸಂಪುಟದಲ್ಲಿ ಯೋಜನೆ ಮಂಡಿಸಲಾಗುವುದು. ಗೋಸಂರಕ್ಷಣೆಗೆ ಆದ್ಯತೆಯ ಮೇಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪಶುಸಂಗೋಪನೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ದುಬೆ ಮಾತನಾಡಿ, "ಈ ಆಶ್ರಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನವನ್ನು ಹೆಚ್ಚಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).