ಬೆಂಗಳೂರು: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ನೀಡಿದ ಅನುಮತಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಎತ್ತಿಹಿಡಿದಿದೆ. ಈ ಕಾರಣಕ್ಕೆ ಕಾನೂನಿನಲ್ಲಿ ಲಭ್ಯ ಅವಕಾಶವನ್ನು ಸಿಎಂ ಸಿದ್ದರಾಮಯ್ಯ ಬಳಕೆ ಮಾಡಿಕೊಂಡು, ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮಜಾಯಿಷಿ ನೀಡಿದರು.
ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಶಾಸಕ ಸತೀಶ್ ಸೈಲ್ ವಿರುದ್ಧ 200ರಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಗ ತೀರ್ಪು ನೀಡಿದ್ದು, ಅದರಂತೆಯೇ ಸತೀಶ್ ಸೈಲ್ ಬಂಧನವಾಗಿದೆ.
ಅನಧಿಕೃತ ಗಣಿಗಾರಿಕೆ, ಅಕ್ರಮ ಅದಿರು ಸಾಗಣೆಗೆ ಸಂಬಂಧಿಸಿದ ಪ್ರಕರಣವದು. ಅದಿರು ಸೀಜ್ ಮಾಡುವುದರ ಜತೆಗೆ ಅನಧಿಕೃತವಾಗಿ ರ್ತು ಮಾಡಿದ ದಾವೆಯೂ ಹೂಡಲಾಗಿತ್ತು.
ಈ ಪ್ರಕರಣದಲ್ಲಿ ಸತೀಶ್ ಸೈಲ್‌ರನ್ನು ಹಿಂದೆಯೂ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದರು. ಇದೀಗ ಅಂತಿಮ ತೀರ್ಪು ಪ್ರಕಾರ ಕ್ರಮವಾಗಿದೆ. ಕಾನೂನು ಹೋರಾಟದಲ್ಲಿ ಮುಂದೆ ಏನಾಗುತ್ತದೋ ನೋಡೋಣವೆಂದರು.
ಯಾರು ಗೆಲ್ಲುತ್ತಾರೆ ಎಂಬ ಅಭಿಪ್ರಾಯಗಳು, ಮಾಹಿತಿ ಆಧಾರದ ಮೇಲೆಯೇ ಟಿಕೆಟ್ ನೀಡಿದ್ದು, ಪಕ್ಷದ ತೀರ್ಮಾನವೇ ಅಂತಿಮವಾಗಿದೆ.ಯಾರು ಸ್ಪರ್ಧಿಸುತ್ತಾರೆ ಎನ್ನುವುದಕ್ಕಿಂತ ಗೆಲ್ಲುವುದೇ ಮುಖ್ಯವಾಗಿದೆ ಎಂದರು.
ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬೇಕಾದ ರಣನೀತಿ ರೂಪಿಸುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.