ನ್ಯೂಸ್

ರಾಜ್ಯಪಾಲರ ಜತೆಗೆ ಸಿಎಂ ಸಿದ್ದರಾಮಯ್ಯ ಮಾತುಕತೆ | Several bills pending

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸೋಮವಾರ ದೆಹಲಿ ಪ್ರವಾಸ, ರಾಷ್ಟ್ರಪತಿ ಭೇಟಿಗೆ ಮುನ್ನ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.

ಸಚಿವರೊಂದಿಗೆ ರಾಜಭವನಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರ ಗೆಹಲೋತ್ ಅವರಿಗೆ ಸೌಜನ್ಯಕ್ಕಾಗಿ ಭೇಟಿಯಾದರು. ಇದೇ ಸಂದರ್ಭದಲ್ಲಿ ಬಾಕಿಯಿರುವ ಮಸೂದೆಗಳಿಗೆ ಅನುಮೋದನೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

ದೆಹಲಿಗೆ ಸೋಮವಾರ ತೆರಳಲಿದ್ದು, ರಾಷ್ಟ್ರಪತಿಗೆ ಭೇಟಿಯಾಗುವೆ. ರಾಜ್ಯದಿಂದ ಕಳುಹಿಸಿರುವ ಬಿಲ್‌ಗಳಿಗೆ ಅಂಕಿತ ಹಾಕಲು ಕೋರುವ ವಿಷಯವನ್ನು ರಾಜ್ಯಪಾಲರ ಗಮನಕ್ಕೆ ಸಿಎಂ ತಂದರು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಎಂ.ಸಿ.ಸುಧಾಕರ್, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಇದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗೆ ಸಿಎಂ ಸಿದ್ದರಾಮಯ್ಯ ರಾಯಚೂರು ಜಿಲ್ಲೆಗೆ ಸೋಮವಾರ ಪ್ರಯಾಣಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ನಂತರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.