ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಬೈಲ್ ಬಳಕೆ ಮಾಡುವುದಿಲ್ಲ. ಯಾಕೆ ಬಳಸುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಇದ್ದೇ ಇದೆ! ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಟ್ಟಿದ್ದು, ಯಾಕೆ ಫೋನ್ ಉಪಯೋಗಿಸುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, '40 ವರ್ಷದಿಂದ ರಾಜಕೀಯ ಜೀವನದಲ್ಲಿದ್ದೀರಾ. ಮೊಬೈಲ್ ಬಳಕೆ ಯಾಕೆ ಮಾಡುತ್ತಿಲ್ಲ' ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು, ಸಿ.ಟಿ ರವಿ, ಈಶ್ವರಪ್ಪ ಕುರಿ ಮೇಯಿಸಿಕೊಂಡು ಇರಬೇಕಿತ್ತು: ಸಿದ್ದರಾಮಯ್ಯ
ಮೊಬೈಲ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಸಂದರ್ಭದಲ್ಲಿ 7-8 ತಿಂಗಳು ಬಳಸಿದ್ದೆ. ಈ ವೇಳೆ ಕೆಲವರು ರಾತ್ರಿಯೆಲ್ಲ ಫೋನ್ ಮಾಡುತ್ತಿದ್ದರು. ಕೆಲವರು ಕುಡಿದ ಮತ್ತಿನಲ್ಲಿ ಕರೆ ಮಾಡಿ ತೊಂದರೆ ಕೊಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಬೇಕಾಗಿ ಬಂತು. ಹೀಗಾಗಿ ಮೊಬೈಲ್ ಬಳಕೆ ಮಾಡುವುದನ್ನು ನಿಲ್ಲಿಸಿಬಿಟ್ಟೆ ಎಂದು ಹೇಳಿದ್ದಾರೆ.
ಇಂದು ಪ್ರತಿಯೊಬ್ಬರಲ್ಲೂ ಮೊಬೈಲ್ ಫೋನ್ ಇದ್ದೇ ಇದೆ. ಹೀಗಿರುವಾಗಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಹೇಗೆ ಕರೆ ಮಾತನಾಡುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. 'ನನ್ನ ಬಳಿ ವೈಯಕ್ತಿಕವಾಗಿ ಫೋನ್ ಇಲ್ಲ. ನಮ್ಮ ಅಧಿಕಾರಿಗಳು, ಆಪ್ತಸಹಾಯಕರ ಫೋನ್ ಬಳಕೆ ಮಾಡುತ್ತೇನೆ' ಎಂದು ಸಿದ್ದರಾಮಯ್ಯ ತಿಳಿಸಿದರು.