ನ್ಯೂಸ್

ಪರಿಹಾರ ನೀಡುವಂತೆ ಸಿಎಂಗೆ ಮುತ್ತಿಗೆ ಎಚ್ಚರಿಕೆ; ಹನುಮಂತಪ್ಪ ಕಬ್ಬಾರ

Haveri - Kariyappa Aralikatti

ರಾಣೆಬೆನ್ನೂರ: ಅನಧಿಕೃತವಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಸಿಎಂ ಪರಿಹಾರ ೂಷಣೆ ಮಾಡದೆ ಹೋದರೆ ಆ. 30ರಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭಕೋಶ ಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಪರಿಹಾರ ನೀಡಬೇಕು ಎಂದು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯ ಮಾಡಲಾಗಿದೆ. ಆದರೆ ಈವರೆಗೂ ಕೇವಲ ಭರವಸೆ ನೀಡಲಾಗಿದ್ದು, ಪರಿಹಾರದ ಕೆಲಸವಾಗಿಲ್ಲ. ಆದ್ದರಿಂದ ದೇವರಗುಡ್ಡ ಕಾರ್ಯಕ್ರಮದಲ್ಲಿ ಸಿಎಂ ಎಲ್ಲ ಮಹಿಳೆಯರಿಗೆ ಪರಿಹಾರ ೂಷಣೆ ಮಾಡಬೇಕು. ಇಲ್ಲವಾದರೆ ಕಪು$್ಪಬಟ್ಟೆ ಪ್ರದರ್ಶನ ಮಾಡುವ ಜೊತೆಗೆ ನೂರಾರು ಮಹಿಳೆಯರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರಾದ ಲಲಿತಾ ಲಮಾಣಿ, ಲಕ್ಷ$್ಮವ್ವ ಲಮಾಣಿ, ಗಂಗಮ್ಮ ಲಮಾಣಿ, ಮಂಜಪ್ಪ ಮರಾಠಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.