ಶಾಸಕ ಕೆ.ಎಸ್. ಆನಂದ್ 
ನ್ಯೂಸ್

ದುರುದ್ದೇಶದಿಂದ ಬಿಜೆಪಿ, ಜೆಡಿಎಸ್ ಪಾದಯಾತ್ರೆ

ಜಿ. ಗಜೇಂದ್ರ

ಕಡೂರು: ರಾಜ್ಯದ ಶೋಷಿತರ ಧ್ವನಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತಂದು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಬಿಜೆಪಿ, ಜೆಡಿಎಸ್‌ನಿಂದ ಪಾದಯಾತ್ರೆ ಮಾಡಿದರು ಎಂದು ಶಾಸಕ ಕೆ.ಎಸ್.ಆನಂದ್ ಆರೋಪಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಬಿಜೆಪಿ, ಜೆಡಿಎಸ್ ಪಾದಯಾತ್ರೆ ದುರುದ್ದೇಶದಿಂದ ಕೂಡಿದೆ. 40 ವರ್ಷದ ರಾಜಕೀಯ ಜೀವನದಲ್ಲಿ ಕಳಂಕವಿಲ್ಲದ ಸಿದ್ದರಾಮಯ್ಯ ರಾಜ್ಯದ ಅಪರೂಪದ ರಾಜಕಾರಣಿ. ಅಂಥವರ ವಿರುದ್ಧ ಆಪಾದನೆ ಮಾಡಲು ಯಾವ ಅವಕಾಶವೂ ದೊರೆಯದೆ ಎರಡೂ ಪಕ್ಷಗಳು ಮುಡಾ ಹಗರಣವನ್ನು ಹಿಡಿದುಕೊಂಡಿವೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್, ಪುರಸಭೆ ಸದಸ್ಯ ಈರಳ್ಳಿ ರಮೇಶ್, ಮನು ಮರುಗುದ್ದಿ, ಕಂಸಾಗರ ಸೋಮಶೇಖರ್, ಕೆ.ಟಿ.ನರಸಿಂಹಪ್ಪ, ಸವಿತಾ, ಎಂ.ಆರ್.ಟಿ.ಸುರೇಶ್, ಅಬಿದ್ ಪಾಷಾ ಇತರರಿದ್ದರು.