ನ್ಯೂಸ್

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ ಅನುಮತಿ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರು: ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ಮುಕ್ತಾಯಗೊಂಡಿದ್ದು, ಅರ್ಜಿ ಕುರಿತು ಹೈಕೋರ್ಟ್​ ಸದ್ಯ ತೀರ್ಪು ಕಾಯ್ದಿರಿಸಿದೆ.

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ವಿಚಾರಣೆಯನ್ನು ನಡೆಸಿದ ಕೋರ್ಟ್​, ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತ್ತು. ರಾಜ್ಯಪಾಲರ ಹಾಗೂ ಮುಖ್ಯಮಂತ್ರಿಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಸುದೀರ್ಘ ವಿಚಾರಣೆಯ ಬಳಿಕ ಇದೀಗ ತೀರ್ಪನ್ನು ಕಾಯ್ದಿರಿಸಿದೆ.

ಹೈಕೋರ್ಟ್​ನಲ್ಲಿ ನಡೆದ ವಾದ-ಪ್ರತಿವಾದದ ಸಂಪೂರ್ಣ ವಿವರ ಈ ಕೆಳಕಂಡಂತಿದೆ ಗಮನಿಸಿ: 

  • ರಾಜ್ಯಪಾಲರು ಸಹಜ ನ್ಯಾಯ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಪ್ರಕರಣದಲ್ಲಿ ಒಬ್ಬರ ದೂರಿನ ಅನುಸಾರ ಶೋಕಾಸ್ ನೋಟಿಸ್ ನೀಡಿದ್ದಾರೆ. ಮತ್ತಿಬ್ಬರ ದೂರಿನ ಬಗ್ಗೆ ಶೋಕಾಸ್ ನೋಟಿಸ್ ಅಗತ್ಯವಿಲ್ಲವೆಂದಿದ್ದಾರೆ.
  • ರಾಜ್ಯಪಾಲರು ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ , ಹೆಚ್ ಡಿ ಕುಮಾರಸ್ವಾಮಿ ಪ್ರಕರಣದಲ್ಲಿ ಅನುಮತಿ ನೀಡಿಲ್ಲ .
  • ಮುಡಾ ಭೂಸ್ವಾಧೀನವಾಗದೇ ಜಮೀನು ಬಳಸಿಕೊಂಡಿದ್ದಕ್ಕೆ ಬದಲಿ ಜಮೀನು ನೀಡಿದೆ. ಈ ಬಗ್ಗೆ ದಾಖಲೆ ನ್ಯಾಯಾಲಯಕ್ಕೆ ಸಲ್ಲಿಸಿದ ಸಿಂಘ್ವಿ.
  • ಈ ರೀತಿ ಸಂಶಯಾಸ್ಪದ ಹಿನ್ನೆಲೆಯ ವ್ಯಕ್ತಿಗಳಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಾರದು ಎಂದು ವಾದ.
  • 50 50 ನಿವೇಶನ ಹಂಚಿಕೆ ಬಿಜೆಪಿ ಸರ್ಕಾರದ ಸಮಯದಲ್ಲಾಗಿದೆ.ಹೀಗಾಗಿ ಈ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲ ಎಂದು ಅಭಿಷೇಕ್ ‌ಮನು ಸಿದ್ದರಾಮಯ್ಯ ಪರ ವಾದ ಮಂಡಿಸಿದರು.

ಸಿಎಂ ಪರ ವಾದ ಮಂಡಿಸಿದ ಪ್ರೋ. ರವಿವರ್ಮ ಕುಮಾರ್

  • ಅಕ್ರಮ ಮತ್ತು ಅಧಿಕಾರ ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂದು ರಾಜ್ಯಪಾಲರ ಉಲ್ಲೇಖವಿದೆ.ಸಹಿ ಹಾಕಿದ ಬಳಿಕ ಷೋಕಾಸ್ ನೋಟಿಸ್ ನೀಡಿದ್ದಾರೆ.
  • ಆ. 14 ರಂದು ಫೈಲ್ ಪರಿಶೀಲಿಸಿದ್ದೇನೆ, ಡಿಕ್ಟೇಷನ್ ನೀಡಿದ್ದೇನೆ ಎಂದು ಬರೆಯಲಾಗಿದೆ. ಆದರೆ ಟಿ.ಜೆ.ಅಬ್ರಹಾಂ ನೀಡಿದ ದೂರಿನ್ವಯ ಜು. 26 ರಂದು 26.07 ರಂದು ಫೈಲ್ ಸಿದ್ದಪಡಿಸಲಾಗಿದೆ. ಜು 5 ರಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಆದರೆ ಕಡತದಲ್ಲಿ ಅದರ ಉಲ್ಲೇಖವಿಲ್ಲ.
  • ರಾಜ್ಯಪಾಲರ ಆದೇಶದಲ್ಲಿ 25 ಸೆಕ್ಷನ್ ಗಳನ್ನು ಉಲ್ಲೇಖಿಸಲಾಗಿದೆ.ಉದಾಹರಣೆಗೆ ಫೋರ್ಜರಿ ಮತ್ತಿತರ ಸೆಕ್ಷನ್ ಉಲ್ಲೇಖಿಸಿದ್ದಾರೆ.ಆದರೆ ಎಲ್ಲಿ ಸಿಎಂ ಫೋರ್ಜರಿ ಮಾಡಿದ್ದಾರಾ ಎಂಬುದಕ್ಕೆ ಉತ್ತರವಿಲ್ಲ.
  • ಜಮೀನು ಸ್ವಾಧೀನವಾದ ಬಳಿಕ ಪರಿಹಾರದ ನೋಟಿಸ್ ವಿಳಂಬವಾಗಿ ತಲುಪಿದೆ. ಮುಡಾ ಜಮೀನನ್ನು ಬೌತಿಕವಾಗಿ ಸ್ವಾಧೀನಕ್ಕೆ ಪಡಿದಿರಲಿಲ್ಲ. ನಂತರ ಸೆ.48 ಅಡಿ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿದೆ.
  • ಮಹಜರ್ ಮಾಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರಲಿಲ್ಲ. ರಾಜ್ಯಪಾಲರು ಮುಡಾ ಸ್ವಾಧೀನದಲ್ಲಿತ್ತು ಎಂದು ಹೇಳಿದ್ದಾರೆ.ಹೀಗಾಗಿ ರಾಜ್ಯಪಾಲರ ಆದೇಶವೇ ಕಾನೂನುಬಾಹಿರವಾಗಿದೆ‌.
  • ಸಿದ್ದರಾಮಯ್ಯ ಮಾತ್ರ ಕಳೆದ ಐವತ್ತು ವರ್ಷಗಳಲ್ಲಿ ಅವಧಿ ಪೂರೈಸಿದ್ದು,ಐದು ವರ್ಷಗಳ ನಂತರವೂ ಮತ್ತೊಮ್ಮೆ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
  • ಈ ರೀತಿ ಜುಜುಬಿ ಸೈಟ್​ಗೆ ಸಿಎಂ ಹೀಗೆಲ್ಲಾ ಮಾಡುವ ಅಗತ್ಯವಿಲ್ಲ
  • 60- 40 ಗೆ ಅವರ ತಕರಾರಿಲ್ಲ, 50- 50 ಅನುಪಾತಕ್ಕೆ ತಕರಾರಿದೆ. ಪರಿಹಾರದ ನಿವೇಶನ ಕೊಟ್ಟಿರುವುದು ಅರ್ಜಿದರರಲ್ಲ ಮುಡಾ.ಈ ರೀತಿ ಜನಪ್ರಿಯ ನಾಯಕನ ವಿರುದ್ಧ ರಾಜ್ಯಪಾಲರು ಈ ರೀತಿ ಅನುಮತಿ ನೀಡಿರುವುದು ರಾಜಕೀಯ ದುರುದ್ದೇಶ ಸ್ಪಷ್ಟಪಡಿಸುತ್ತದೆ.
  • ಅಧಿಕಾರದಲ್ಲಿದ್ದಾಗ ಸಂಬಂಧಿಕರು, ಅಧಿಕಾರಿಗಳು ಅಸೂಯೆಯಿಂದ ಏನಾದರೂ ಮಾಡಿರಬಹುದು.. ಅದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಸಿಎಂ ಪರ ಪ್ರೊ. ರವಿವರ್ಮಕುಮಾರ್ ವಾದಮಂಡನೆ.

ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದಮಂಡನೆ

  • ಯಾವುದೇ ತನಿಖೆಯ ಆಧಾರವಿಲ್ಲದೇ 17 ಎ ಅನುಮತಿಯೇ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
  • ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ರಾಜ್ಯಪಾಲರು ಪಾಲಿಸಿಲ್ಲ..
  • ಹೀಗಾಗಿ ರಾಜ್ಯಪಾಲರ ಅನುಮತಿ ಕಾನೂನುಬಾಹಿರವೆಂದು ವಾದಮಂಡನೆ.

ದೂರುದಾರ ಟಿ.ಜೆ.ಅಬ್ರಹಾಂ ಪರ ರಂಗನಾಥ್ ರೆಡ್ಡಿ ವಾದ

  • ಒಂದೆಡೆ ಕೃಷಿ ಜಮೀನೆಂದು , ಮತ್ತೊಂದೆಡೆ ಮುಡಾ ಜಮೀನು ಒತ್ತುವರಿ ಮಾಡಿದೆ ಎನ್ನುತ್ತಿದ್ದಾರೆ.
  • ಸಿಎಂ ಪರ ವಕೀಲತ ಎರಡೆರಡು ರೀತಿಯಲ್ಲಿ ವಾದ ಮಂಡಿಸುತ್ತಿದ್ದಾರೆ
  • ಪ್ರಕ್ರಿಯೆ ಪಾಲಿಸದೇ ಹಣವನ್ನು ಠೇವಣಿ ಇಡುವುದು ಸಾಧ್ಯವಿಲ್ಲ .
  • ಇದು ಹೇಗಾಗಿದೆ ಎಂದರೆ ದೇವನೂರು ಬಡಾವಣೆಯ ಜಮೀನಿಗೆ ವಿಜಯನಗರದಲ್ಲಿ ಬದಲಿ ನಿವೇಶನ. ಚಿಂತಾಮಣಿಯ ಜಮೀನಿಗೆ ಸದಾಶಿವನಗರದಲ್ಲಿ ನಿವೇಶನ ಕೊಟ್ಟಂತಾಗಿದೆ ಎಂದು ವಾದ ಮಂಡನೆ.