ನ್ಯೂಸ್

ಬೆಂಗಳೂರು ಕೈ ಶಾಸಕರೊಂದಿಗೆ ಸಿಎಂ ಸಭೆ; ಅನುದಾನ, ಚುನಾವಣೆ ಕುರಿತೇ ಚರ್ಚೆ

ಬೆಂಗಳೂರು: ಸ್ವಪಕ್ಷೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಜಿಲ್ಲಾವಾರು ಶಾಸಕರ ಸಭೆ ನಡೆಸುತ್ತಿರುವ ಸಿದ್ದರಾಮಯ್ಯ ಬುಧವಾರ ಬೆಂಗಳೂರು ವ್ಯಾಪ್ತಿಯ ಸಭೆ ನಡೆಸಿದರು.

ಕ್ಷೇತ್ರದ ಅಭಿವೃದ್ಧಿ ಕೆಲಸಗಳು-ಅನುದಾನ, ಸರ್ಕಾರ- ಪಕ್ಷದ ಜತೆಗಿನ ಸಮನ್ವಯ ಹಾಗೂ ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಮತ್ತು ಚುನಾವಣೆ ಕುರಿತಾಗಿ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸಲಹೆಗಳನ್ನು ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಂಸದರಾದ ಡಿ.ಕೆ.ಸುರೇಶ್, ಸಚಿವ ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಕೆ.ಜೆ ಜಾರ್ಜ್, ಬೈರತಿ ಸುರೇಶ್ ಸೇರಿ ಆಡಳಿತ ಪಕ್ಷದ ಶಾಸಕರು ಉಪಸ್ಥಿತರಿದ್ದರು.

ಲೋಕಸಭೆ ಚುನಾವಣೆ ತಯಾರಿ, ಬಿಬಿಎಂಪಿ ಕಗಷೇತ್ರ ಪುನರ್ ವಿಂಗಡಣೆ- ಚುನಾವಣೆ ತಯಾರಿ, ಅನುದಾನ ಬೇಡಿಕೆ, ಹಿಂದಿನ ಅವಧಿಯಲ್ಲಾದ ಕಾಮಗಾರಿಗಳ ವಿಷಯ, ಗುತ್ತಿಗೆದಾರರ ವಿಚಾರ ಹೀಗೆ ವಿವಿಧ ವಿಚಾರಗಳ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ ಹಾಗೂ ಶಾಸಕ ಸಚಿವರ ನಡುವೆ ವಿಚಾರ ವಿನಿಮಯ ನಡೆಯಿತು.