Digha: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಏ. 29) ದಿಘಾದಲ್ಲಿರುವ ಜಗನ್ನಾಥ ದೇವಸ್ಥಾನಕ್ಕೆ ಚಿನ್ನದಿಂದ ಮಾಡಿದ ಪೊರಕೆಯನ್ನು ದಾನ ಮಾಡಿದ್ದಾರೆ.
ಇದನ್ನೂ ಓದಿ: ಇವರೇ ನೋಡಿ 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳು; ಇಲ್ಲಿದೆ ಸಂಪೂರ್ಣ ವಿವರ | Karnataka SSLC Result 2025
ದಿಘಾದಲ್ಲಿ ನಿರ್ಮಿಸಲಾದ ಭವ್ಯವಾದ ಜಗನ್ನಾಥ ದೇವಸ್ಥಾನಕ್ಕೆ 5 ಲಕ್ಷ ರೂಪಾಯಿ ಮೌಲ್ಯದ ಪೊರಕೆಯನ್ನು ಮಮತಾ ಬ್ಯಾನರ್ಜಿ ದಾನ ಮಾಡಿದ್ದಾರೆ. ಅಷ್ಟಕ್ಕೂ, ಅವರು ದಾನ ಮಾಡಿದ ಆ ಪೊರಕೆಯಲ್ಲಿ ಏನು ವಿಶೇಷತೆ ಇದೆ ಗೊತ್ತಾ?
ಆ ಪೊರಕೆಯನ್ನು ಚಿನ್ನದಿಂದ ಮಾಡಲ್ಪಟ್ಟಿದೆ. ಶುಚಿಗೊಳಿಸುವಿಕೆಗಾಗಿ ಕೆಳಭಾಗದಲ್ಲಿ ಸೆಣಬು ಮತ್ತು ವಿಶೇಷ ರೀತಿಯ ನಾರುಗಳನ್ನು ಜೋಡಿಸಲಾಗಿದೆ. ಇದರಿಂದಲೇ ದಿಘಾದ ಜಗನ್ನಾಥ ದೇವರ ವಿಗ್ರಹಗಳನ್ನು ಸ್ವಚ್ಛಗೊಳಿಸಲಾಗುತ್ತದೆ.
ದಿಘಾದ ಜಗನ್ನಾಥ ದೇವಾಲಯವನ್ನು ಪಶ್ಚಿಮ ಬಂಗಾಳ ಸರ್ಕಾರವು 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ದೇವಾಲಯದ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಸರ್ಕಾರಿವೇ ಭರಿಸಿದೆ. ಈ ದೇವಾಲಯವು ಪಶ್ಚಿಮ ಬಂಗಾಳ ಸರ್ಕಾರದ ಒಡೆತನದಲ್ಲಿದೆ ಮತ್ತು ಅದರ ನಿರ್ವಹಣೆಯಲ್ಲಿದೆ.
ಮಮತಾ ನೀಡಿದ ವಿಶೇಷ ಪೊರಕೆಯನ್ನು ಯಾವುದಕ್ಕೆ ಬಳಸಲಾಗುತ್ತದೆ?
ಮಮತಾ ಬ್ಯಾನರ್ಜಿ ದೇವಸ್ಥಾನಕ್ಕೆ ದಾನ ಮಾಡಿರುವ ಚಿನ್ನದ ಪೊರಕೆಯನ್ನು ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳಲ್ಲಿ ಮಾತ್ರ ಬಳಸಲಾಗುತ್ತದೆ. ರಥಯಾತ್ರೆಯಂತಹ ಪ್ರಮುಖ ಹಬ್ಬಗಳ ಸಮಯದಲ್ಲಿ ರಥವನ್ನು ಸ್ವಚ್ಛಗೊಳಿಸಲು ಈ ಚಿನ್ನದ ಪೊರಕೆಯನ್ನು ಬಳಸಲಾಗುತ್ತದೆ.
ಐದು ಲಕ್ಷ ರೂ ಯಾಕೆ ಖರ್ಚಾಗಿದೆ?
ಚಿನ್ನದ ಪೊರಕೆಯ ಬೆಲೆ ಮುಖ್ಯವಾಗಿ ಅದರಲ್ಲಿ ಬಳಸುವ ಚಿನ್ನದಿಂದಾಗಿರುತ್ತದೆ. ಪೊರಕೆಯನ್ನು ಸಂಪೂರ್ಣವಾಗಿ ಚಿನ್ನದಿಂದ ತಯಾರಿಸಲಾಗುತ್ತದೆ. ಅವರು ಈ ಪೊರಕೆಯನ್ನು ಕೋಲ್ಕತ್ತಾದಲ್ಲಿ ತಯಾರಿಸಿದ್ದಾರೆಂದು ಹೇಳಿದ್ದಾರೆ. (ಏಜೆನ್ಸೀಸ್)