ಕೋಲ್ಕತ: ಪಶ್ಚಿಮ ಬಂಗಾಳ ಸಂಭವಿಸಿದ ರೈಲು ಅಪಘಾತದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರದ ನಿಯಂತ್ರಣದಲ್ಲಿರುವ ರೈಲ್ವೆ ಸಚಿವಾಲಯವು ಪ್ರಯಾಣಿಕರ ಸೌಕರ್ಯಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ, ಸರ್ಕಾರಕ್ಕೆ ಚುನಾವಣೆಯ ಬಗ್ಗೆ ಮಾತ್ರ ಕಾಳಜಿ ಇದೆ ಎಂದು ಹೇಳಿದರು.
ರೈಲ್ವೆ ಅಧಿಕಾರಿಗಳು, ರೈಲ್ವೆ ಇಂಜಿನಿಯರ್‌ಗಳು, ರೈಲ್ವೆ ತಾಂತ್ರಿಕ ಸಿಬ್ಬಂದಿ ಮತ್ತು ಕಾರ್ಮಿಕರ ಬಗ್ಗೆಯೂ ಅವರು ಕಾಳಜಿ ವಹಿಸುವುದಿಲ್ಲ. ಅವರ ಹಳೆಯ ಪಿಂಚಣಿ ಹಿಂಪಡೆಯಲಾಗಿದ್ದು, ಅವರೂ ತೊಂದರೆಯಲ್ಲಿದ್ದಾರೆ. ನಾನು ರೈಲ್ವೆ ನೌಕರರು ಮತ್ತು ರೈಲ್ವೆ ಅಧಿಕಾರಿಗಳ ಜತೆಗಿದ್ದೇನೆ ಎಂದಿದ್ದಾರೆ.
ಈ ಸರ್ಕಾರಕ್ಕೆ ಚುನಾವಣೆಯ ಬಗ್ಗೆ ಮಾತ್ರ ಕಾಳಜಿ ಇದೆ. ಹ್ಯಾಕ್ ಮಾಡುವುದು ಹೇಗೆ, ಮ್ಯಾನಿಪ್ಯುಲೇಟ್ ಮಾಡುವುದು ಹೇಗೆ, ಚುನಾವಣೆಗಳನ್ನು ರಿಗ್ ಮಾಡುವುದು ಹೇಗೆ ಎಂಬುದರ ಮೇಲೆ ಗಮನವಿದೆ. ನನ್ನ ಪ್ರಕಾರ ಅವರು ಆಡಳಿತಕ್ಕೆ ಹೆಚ್ಚು ಸಮಯ ನೀಡಬೇಕೆ ಹೊರತು ವಾಕ್ಚಾತುರ್ಯಕ್ಕೆ ಅಲ್ಲ ಎಂದ ಹೇಳಿದರು.
ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದ ಬಳಿ ಸೋಮವಾರ (ಜೂನ್ 17) ಗೂಡ್ಸ್ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಭಾರೀ ಅಪಘಾತ ಸಂಭವಿಸಿತ್ತು. (ಏಜೆನ್ಸೀಸ್)