ನ್ಯೂಸ್

ಜಾನುವಾರು ಗಣತಿಗೆ ಸಿಎಂ ಚಾಲನೆ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ರಾಷ್ಟ್ರೀಯ ಜಾನುವಾರು ಗಣತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.

ಗೋವು ಹಾಗೂ ಮೇಕೆ ಮರಿಯ ಗಣತಿಯನ್ನು ಸಿಎಂ ಸಮ್ಮುಖದಲ್ಲಿ ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ನೆರವೇರಿಸಲಾಯಿತು. ಗಣತಿಯ ಸ್ವರೂಪ ಪೂರ್ವ ತಯಾರಿ ಕುರಿತು ಈ ವೇಳೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.

ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಜಾನುವಾರು ಗಣತಿಯು 2025ರ ೆಬ್ರವರಿ ವರೆಗೂ ನಡೆಯುವುದು. ರಾಷ್ಟ್ರ ಮಟ್ಟದ ಗಣತಿ ಕಾರ್ಯಕ್ಕೆ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅಕ್ಟೋಬರ್ 21ರಂದು ಚಾಲನೆ ನೀಡಿದ್ದರು. ಸಾಕು ಪ್ರಾಣಿಗಳ ನಿಖರ ಮಾಹಿತಿ, ಬೆಳವಣಿಗೆ ಪ್ರಮಾಣ ಮತ್ತು ಆರೋಗ್ಯ ಸುರಕ್ಷತೆಗೆ ಕಾರ್ಯಕ್ರಮ ರೂಪಿಸಲು ಈ ಗಣತಿ ಸಹಾಯಕವಾಗಲಿದೆ.

ಈ ಹಿಂದಿನ ಮಾಹಿತಿ ಸಂಗ್ರಹ ಪ್ರಕ್ರಿಯೆ ನಿರ್ದಿಷ್ಟ ನಮೂನೆಯಲ್ಲಿ ಕೈ ಬರಹದ ತುಂಬಲಾಗುತ್ತಿತ್ತು. ಈ ಬಾರಿ ಸ್ಮಾರ್ಟ್ ೆನ್ ಆ್ಯಪ್ ಬಳಸಲಾಗುತ್ತದೆ. ಗಣತಿದಾರರಿಗೆ ತರಬೇತಿಯೂ ಮುಗಿದಿದೆ. ನೆಟ್‌ವರ್ಕ್ ಇಲ್ಲದಿದ್ದರೂ ಮಾಹಿತಿ ದಾಖಲಿಸಿಕೊಂಡರೆ ನೆಟ್‌ವರ್ಕ್ ಲಭ್ಯವಾದ ಕೂಡಲೇ ದತ್ತಾಂಶ  ಸರ್ವರ್‌ಗೆ ಸೇವ್ ಆಗಲಿದೆ.