ನ್ಯೂಸ್

ಸಿಎಂ, ಡಿಸಿಎಂ ರಾಜೀನಾಮಗೆ ಸಚಿವ ಜೋಶಿ ಆಗ್ರಹ

Bengaluru - Political - Shivananda Tagadur

ಬೆಂಗಳೂರು:
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯಚಹಾರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೊದಲು ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
ಅರಮನೆ ಆವರಣದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಎನ್‌ಡಿಎ ಸಂಸದರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ವಾಲ್ಮಿಕಿ ನಿಗಮ ಅವ್ಯವಹಾರದಲ್ಲಿ ಬರೀ ಸಚಿವ ನಾಗೇಂದ್ರ ಒಬ್ಬರ ರಾಜೀನಾಮೆ ಕೊಡಿಸಿ, ನಾನೊಬ್ಬ ಸಾಚಾ ಅಂತಾ ಫೋಸ್ ಕೊಡ್ತಿದ್ದೀರಲ್ಲ. ನಿಮಗೆ ನಾಚಿಕೆ ಆಗುವುದಿಲ್ಲವೇ? ನಿಮ್ಮ ದುರಹಂಕಾರಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಈ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿಯೇ ಮತದಾರರು ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ನಿಜವಾಗಿಯೂ ನಾಚಿಕೆ ಮಾನ ಮರ್ಯಾದೆ ಇದ್ದಿದ್ದರೆ ಮೊದಲು ರಾಜೀನಾಮೆ ನೀಡಲಿ ಎಂದರು.
ಚುನಾವಣೆಯಲ್ಲಿ ಪ್ರಚಾರಕ್ಕಿಂತ ಅಪಪ್ರಚಾರ ಹೆಚ್ಚು ಮಾಡಿದ್ರು. ಇದರ ಮಧ್ಯೆಯೂ ನಮಗೆ 19 ಸ್ಥಾನಗಳನ್ನು ನೀಡುವ ಮೂಲಕ ಪ್ರಚಂಡ ಗೆಲುವು ಕೊಟ್ಟ ಮತದಾರರಿಗೆ ಅಭಿನಂದನೆಗಳು ಎಂದರು.
ನೆಹರೂ ನಂತರ ನರೇಂದ್ರ ಮೋದಿ ಮಾತ್ರ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆಗಿದಾರೆ. ನವ್ಮ ನಿರೀಕ್ಣೆಗಿಂತ ಕಡಿಮೆ ಸೀಟ್ ಬಂದಿರೋದು ನಿಜ. ಮೂರು ಎಲೆಕ್ಣನ್ ಸೇರಿದರೂ ಕಾಂಗ್ರೆಸ್‌ನವರ ಸೀಟ್ ನಮಗೆ ಸಮವಾಗಲ್ಲ ಎಂದರು.
ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ನಮಗೆ ಒಳ್ಳೆಯ ಅವಕಾಶ ಇದೆ. ಎಲ್ಲರೂ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿ. ಕಾರ್ಯಕರ್ತರಿಗೆ ಬಲ ತುಂಬುವ ಕೆಲಸವನ್ನು ಮಾಡೋಣ. ಮೋದಿ ನಾಯಕತ್ವದಲ್ಲಿ ನಾವು ಎಲ್ಲ ವಿಧಾನಸಭೆ ಚುನಾವಣೆ ಗೆಲ್ಲೋಣ. ಭವಿಷ್ಯದಲ್ಲೂ ದೇಶದಲ್ಲಿ ಎನ್ಡಿಎ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದರು.